ಮುಂಬೈ: 5ಜಿ ನೆಟ್‌ವರ್ಕ್ ಸೇವೆಯನ್ನು ಮತ್ತೆ 406 ನಗರಗಳಲ್ಲಿ ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
‘16 ರಾಜ್ಯಗಳ 406 ನಗರಗಳಿಗೆ 5ಜಿ ನೆಟ್‌ವರ್ಕ್ ಸೇವೆ ಒದಗಿಸಲಾಗಿದೆ. ಈ ಮೂಲಕ ಅತಿವೇಗದಲ್ಲಿ ದೇಶದಲ್ಲಿ 5ಜಿ ಸೇವೆಯನ್ನು ವಿಸ್ತರಿಸುವಲ್ಲಿ ರಿಲಯನ್ಸ್ ಜಿಯೊ ಮೊದಲ ಸ್ಥಾನದಲ್ಲಿದೆ‘ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಆಂಧ್ರ ಪ್ರದೇಶ, ಛತ್ತೀಸಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ ಸೇರಿದಂತೆ 16 ರಾಜ್ಯಗಳ 406 ನಗರಗಳಿಗೆ 5ಜಿ ಸೇವೆ ಸಿಗಲಿದೆ. ಈಗಾಗಲೇ ದೇಶದಾದ್ಯಂತ 358 ನಗರಗಳಲ್ಲಿ ಈ ಸೌಲಭ್ಯ ದೊರಕುತ್ತಿದೆ ಎಂದು ರಿಲಯನ್ಸ್ ವಿವರಿಸಿದೆ.
ಈ ಪಟ್ಟಿಯಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ರಾಬರ್ಟ್‌ಸನ್‌ಪೇಟೆ ಕೂಡ ಸೇರಿದೆ.
‘ಇಂದಿನಿಂದ ಜಿಯೊದ ಅನ್‌ಲಿಮಿಟೆಡ್ ಆಫರ್ ಮುಖೇನ ಸೆಕೆಂಡಿಗೆ 1 ಜಿಗಾ ಬೈಟ್ ವೇಗದಲ್ಲಿ ಡೇಟಾ ಬಳಕೆಯನ್ನು ಆನಂದಿಸಬಹುದು. 5ಜಿ ಸೇವೆಯಿಂದಾಗಿ ಅಡೆತಡೆಯಿಲ್ಲದ ವೇಗದ ಇಂಟರ್ನೆಟ್‌ನ ಸೌಲಭ್ಯ ಅನುಭವಿಸಬಹುದಾಗಿದ್ದು ನಗರಗಳಲ್ಲಿ ಜನಸಾಮಾನ್ಯರಿಗಲ್ಲದೆ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಲಾಭದಾಯಕವಾಗಲಿದೆ‘ ಎಂಬ ಅಭಿಪ್ರಾಯ ತಿಳಿಸಿದೆ.
2023ರ ಅಂತ್ಯದ ಹೊತ್ತಿಗೆ ದೇಶದ ಎಲ್ಲಾ ನಗರಗಳಿಗೆ ಜಿಯೊ 5ಜಿ ಸೇವೆ ವಿಸ್ತರಿಸಲಾಗುವುದು ಎಂದು ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ಈಗಾಗಲೇ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.