ADVERTISEMENT

ಐಫೋನ್‌ಗೆ ಮತ್ತೆ ಸ್ಯಾಮ್‌ಸಂಗ್‌ OLED ಪ್ಯಾನೆಲ್, ಚೀನಾ ಕಂಪನಿ ಕೈತಪ್ಪಿದ ಅವಕಾಶ

ಏಜೆನ್ಸೀಸ್
Published 30 ನವೆಂಬರ್ 2019, 7:15 IST
Last Updated 30 ನವೆಂಬರ್ 2019, 7:15 IST
ಆ್ಯಪಲ್‌ ಐಫೋನ್‌ – ಸಾಂದರ್ಭಿಕ ಚಿತ್ರ
ಆ್ಯಪಲ್‌ ಐಫೋನ್‌ – ಸಾಂದರ್ಭಿಕ ಚಿತ್ರ   

ಸೋಲ್‌:ವೆಚ್ಚಹೆಚ್ಚಿದರೂ ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಆ್ಯಪಲ್‌ ಸಂಸ್ಥೆ 2020ರಲ್ಲಿ ಬಿಡುಗಡೆಗೆ ಉದ್ದೇಶಿಸಿರುವ ಹೊಸ ಐಫೋನ್‌ಗಳಲ್ಲಿ 'ಆನ್‌–ಸೆಲ್‌ ಟಚ್‌ ಒಎಲ್‌ಇಡಿ ಪ್ಯಾನೆಲ್‌' ಬಳಸಲಿದೆ. ಆ ಪ್ಯಾನೆಲ್‌ಗಳನ್ನು 'ಸ್ಯಾಮ್‌ಸಂಗ್‌ ಡಿಸ್‌ಪ್ಲೇ' ಪೂರೈಸುತ್ತಿದೆ.

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಮತ್ತು ಐಫೋನ್‌ ಉತ್ಪನ್ನಗಳಿಗೆ ತೀವ್ರ ಪೈಪೋಟಿ ಇದೆ. ಆದರೆ, ಐಫೋನ್‌ ಡಿಸ್‌ಪ್ಲೇ ಪ್ಯಾನಲ್‌ಗೆ ಸ್ಯಾಮ್‌ಸಂಗ್ ತಂತ್ರಜ್ಞಾನವನ್ನು ನೆಚ್ಚಿಕೊಂಡಿದೆ. ಅಮೊಲೆಡ್‌ ಮತ್ತು ಸದ್ಯ ಬಳಕೆಯಲ್ಲಿರುವ ಒಎಲ್‌ಇಡಿ ಡಿಸ್‌ಪ್ಲೇಗಳಲ್ಲಿ ಇರುವುದಕ್ಕಿಂತಲೂ ಸೂಕ್ಷ್ಮ ಟಚ್‌ ಸೆನ್ಸಿಂಗ್‌ಅನುಭವವನ್ನು'ಆನ್‌–ಸೆಲ್‌ ಟಚ್‌ ಒಎಲ್‌ಇಡಿ ಪ್ಯಾನೆಲ್‌‘ ನೀಡುತ್ತದೆ. ಇದನ್ನು ವೈ–ಆಕ್ಟಾ (ಎಂಟು ಪದರಗಳನ್ನು ಹೊಂದಿರುವ ಡಿಸ್‌ಪ್ಲೇ) ತಂತ್ರಜ್ಞಾನವೆಂದು ಕರೆಯಲಾಗುತ್ತದೆ.

ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಸಹ ತನ್ನ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಈ ಪ್ಯಾನೆಲ್‌ಗಳನ್ನು ಬಳಸುತ್ತಿದೆ.ಆನ್‌–ಸೆಲ್‌ ಟಚ್‌ ಫ್ಲೆಕ್ಸಿಬಲ್‌ ಒಎಲ್‌ಇಡಿ ಪ್ಯಾನೆಲ್‌ಗಳನ್ನು ಪೂರೈಸುವ ಪ್ರಮುಖ ಪೂರೈಕೆದಾರ ಸ್ಯಾಮ್‌ಸಂಗ್‌ ಡಿಸ್‌ಪ್ಲೇ ಆಗಿದೆ ಎಂದು ಕೊರಿಯಾದ ಸುದ್ದಿ ತಾಣETNews ವರದಿ ಮಾಡಿದೆ. 5.4 ಇಂಚು ಮತ್ತು 6.7 ಇಂಚಿನ ಒಎಲ್‌ಇಡಿ ಪ್ಯಾನೆಲ್‌ಗಳನ್ನು ಪೂರೈಸುತ್ತಿದೆ.

ADVERTISEMENT

ಸ್ಯಾಮ್‌ಸಂಗ್‌ ಮತ್ತು ಎಲ್‌ಜಿ ಸಂಸ್ಥೆಗಳು ಮಾತ್ರವೇ ಆ್ಯಪಲ್‌ ಐಫೋನ್‌ಗಳಿಗೆಒಎಲ್‌ಇಡಿ ಪ್ಯಾನೆಲ್‌ ಪೂರೈಸುತ್ತಿದ್ದು, ಚೀನಾದ 'ಬಿಒಇ'ಗೆಪ್ಯಾನೆಲ್‌ ಪೂರೈಕೆ ಅವಕಾಶ ತಪ್ಪಿದೆ. ಮೊಬೈಲ್‌ ಡಿಸ್‌ಪ್ಲೇ ತಂತ್ರಜ್ಞಾನದಲ್ಲಿ ಚೀನಾಗಿಂತಲೂ ದಕ್ಷಿಣ ಕೊರಿಯಾ ಬಹಳಷ್ಟು ಮುಂದೆ ಸಾಗಿರುವುದಾಗಿ ವರದಿಯಾಗಿದೆ.

ಐಫೋನ್‌ ಪ್ರಾರಂಭದಿಂದಲೂ ಫಿಲ್ಮ್‌ ಟಚ್‌ ಕ್ರಮವನ್ನು ಅನುಸರಿಸುತ್ತಿದ್ದು, ಸ್ಯಾಮ್‌ಸಂಗ್‌ ವೈ–ಆಕ್ಟಾ ತಂತ್ರಜ್ಞಾನವನ್ನು ಪ್ರಚುರಪಡಿಸುವ ಮೂಲಕ ಯಶಸ್ಸು ಕಂಡಿದೆ. ಪ್ರಸ್ತುತ ಸ್ಯಾಮ್‌ಸಂಗ್‌ ಪೂರೈಸುತ್ತಿರುವ ಒಎಲ್‌ಇಡಿ ಪ್ಯಾನೆಲ್‌ನಲ್ಲಿ 'ಟಚ್‌' ತಂತ್ರಜ್ಞಾನವನ್ನೂ ಸೇರಿಸಿಯೇ ರೂಪಿಸಲಾಗಿದೆ. 5.4 ಇಂಚು, 6.1 ಇಂಚು ಹಾಗೂ 6.7 ಇಂಚಿನ ಹೊಸ ಐಫೋನ್‌ ಮಾದರಿಗಳು 2020ರಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ.

6.1 ಇಂಚಿನ ಒಎಲ್‌ಇಡಿ ಪ್ಯಾನೆಲ್‌ ಫಿಲ್ಮ್ ಟಚ್‌ ಕ್ರಮವನ್ನೇ ಹೊಂದಿರಲಿದ್ದು, ಅವುಗಳನ್ನು ಎಲ್‌ ಡಿಸ್‌ಪ್ಲೇ ಸಿದ್ಧಪಡಿಸುತ್ತಿದೆ.

ದಕ್ಷಿಣ ಕೊರಿಯಾ ಕಂಪನಿಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು, ವೆಚ್ಚ ಕಡಿತಗೊಳಿಸಿಕೊಳ್ಳಲು ಆ್ಯಪಲ್‌ ಸಂಸ್ಥೆ ಬಿಒಇ ಸಿದ್ಧಪಡಿಸಿದ ಫ್ಲೆಕ್ಸಿಬಲ್ ಒಎಲ್‌ಇಡಿ ಡಿಸ್‌ಪ್ಲೇಗಳ ಪರೀಕ್ಷೆಯಲ್ಲಿ ತೊಡಗಿರುವುದಾಗಿ ಆಗಸ್ಟ್‌ನಲ್ಲಿ ವರದಿಯಾಗಿತ್ತು.

ಬೀಜಿಂಗ್‌ನಲ್ಲಿ 1993ರಲ್ಲಿ ಪ್ರಾರಂಭವಾದ ಬಿಒಇ ಸಂಸ್ಥೆ ಜಗತ್ತಿನ ಪ್ರಮುಖ ಡಿಸ್‌ಪ್ಲೇ ಉತ್ಪಾದಕರಲ್ಲಿ ಒಂದಾಗಿದ್ದು, ಸ್ಮಾರ್ಟ್‌ಫೋನ್‌, ಟಿವಿ, ಗೃಹೋಪಯೋಗಿ ವಸ್ತುಗಳು ಹಾಗೂ ಇತರೆ ಎಲೆಕ್ಟ್ರಾನಿಕ್‌ ಉಪಕರಣಿಗೆ ಸ್ಕ್ರೀನ್‌ಗಳನ್ನು ಪೂರೈಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.