ADVERTISEMENT

ಹೆಚ್ಚಾಗಿದೆ ಸ್ನಾಪ್‌ಚಾಟ್‌ ಡಿಸ್ಮಾರ್ಫಿಯಾ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 19:41 IST
Last Updated 26 ಸೆಪ್ಟೆಂಬರ್ 2018, 19:41 IST
2
2   

ಇತ್ತೀಚೆಗೆ ಮೊಬೈಲ್‌ಗಳಲ್ಲಿ ಸ್ನಾಪ್‌ಚಾಟ್‌ ಅಥವಾ ಬೇರೆ ಬೇರೆ ಆ್ಯಪ್‌ಗಳ ಮೂಲಕ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ.ಯುವಜನರಲ್ಲಿ ಸೆಲ್ಫಿ ಕ್ರೇಜ್‌ ಹೆಚ್ಚಾಗುತ್ತಿದ್ದು,ನಾನಾ ಭಂಗಿಗಳ, ಚಿತ್ರವಿಚಿತ್ರವಾಗಿ ಫೋಟೊ ತೆಗೆಸಿಕೊಳ್ಳುವ ಖಯಾಲಿ ಹೆಚ್ಚಾಗಿದೆ. ಈ ಸೆಲ್ಫಿಗಳಲ್ಲಿ ವ್ಯಕ್ತಿಗಳು ತಾವು ಇರುವುದಕ್ಕಿಂತ ಬೆಳ್ಳಗೆ ಹಾಗೂ ಸುಂದರವಾಗಿ ಕಾಣುತ್ತಾರೆ. ಕೆಲ ಆ್ಯಪ್‌ಗಳ ಮೂಲಕ ಕಣ್ಣು, ಮೂಗುಗಳನ್ನು ಮನಕ್ಕೆ ಬಂದಂತೆ ಎಡಿಟ್‌ ಮಾಡಿಕೊಳ್ಳುವ ಸೌಲಭ್ಯವೂ ಇದೆ.

ಈಗ ಹೊಸಸಮಸ್ಯೆಯೆಂದರೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಆ ಸೆಲ್ಫಿಗಳಂತೆ ತಾವು ಕಾಣಿಸಿಕೊಳ್ಳಬೇಕು ಎಂದುಯುವಕ– ಯುವತಿಯರು ವೈದ್ಯರ ಹಿಂದೆ ಬಿದ್ದಿದ್ದಾರಂತೆ.

ಈ ಮಾನಸಿಕ ಕಾಯಿಲೆಗೆ ‘ಡಿಸ್ಮಾರ್ಫಿಯಾ’ ಎಂದು ಹೆಸರಿಟ್ಟಿದ್ದು, ವಿಶ್ವದ ಎಲ್ಲಾ ಭಾಗಗಳಲ್ಲಿ ವೈದ್ಯರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಈಗ ಜನರು ಸೆಲೆಬ್ರಿಟಿಗಳಂತೆ ಕಾಣಬೇಕೆಂದು ಬಯಸುತ್ತಿಲ್ಲ, ಬದಲಾಗಿ ಮಿರರ್‌ ಮೊಬೈಲ್‌ನಲ್ಲಿ ತೆಗೆಸಿಕೊಂಡ ಫೋಟೊಗಳನ್ನು ತೋರಿಸಿ, ಅದರಂತೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಲು ಬಯಸುತ್ತಿದ್ದಾರೆ.

ADVERTISEMENT

ಈ ಸೆಲ್ಫಿಗಳಲ್ಲಿ ವ್ಯಕ್ತಿಯ ಮುಖದಲ್ಲಿ ಯಾವುದೇ ದೋಷಗಳು ಕಾಣಿಸದೇ, ಫೋಟೊ ಸುಂದರವಾಗಿ ಬಂದಿರುತ್ತದೆ. ಆದರೆ ಇದು ನಿಜವಾದ ಸೌಂದರ್ಯವಲ್ಲ. ಈ ರೀತಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಲು ಬಯಸುವವರಲ್ಲಿ 17ರಿಂದ 35 ವರ್ಷದವರೇ ಹೆಚ್ಚಿನವರು.

ಈ ಸಮಸ್ಯೆಯು ವ್ಯಕ್ತಿಯಲ್ಲಿ ಗಂಭೀರ ಮಾನಸಿಕ ಅಸ್ವಸ್ಥತೆಯನ್ನು ತರಬಹುದು. ಇಂತಹವರಿಗೆ ವಾಸ್ತವಿಕತೆ ಹಾಗೂ ಕಲ್ಪನೆ ಲೋಕದ ನಡುವೆ ವ್ಯತ್ಯಾಸ ಬಗ್ಗೆ ಅರಿವಿಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇನ್‌ಸ್ಟಾಗ್ರಾಂ, ಸ್ನಾಪ್‌ಚಾಟ್‌ ಗಳಿಂದ ಬಾಡಿ ಶೇಮಿಂಗ್‌ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಾಳಜಿ ವ್ಯಕ್ತಪಡಿಸಿರುವ ಚರ್ಮರೋಗತಜ್ಞರು, ಈ ಹಿಂದೆ ಪ್ರಸಿದ್ಧ ವ್ಯಕ್ತಿಗಳ, ಸೆಲೆಬ್ರಿಟಿಗಳ ಫೋಟೊಗಳನ್ನು ತೋರಿಸಿ, ಅದರಂತೆ ಸರ್ಜರಿ ಮಾಡಿಸಿಕೊಳ್ಳಲು ಬಯಸುತ್ತಿದ್ದರು. ಆದರೆ ಈಗ ತಮ್ಮದೇ ಎಡಿಟೆಡ್‌ ಸೆಲ್ಫಿಗಳನ್ನು ತರುತ್ತಾರೆ ಎಂದಿದ್ದಾರೆ.

ಅಸುರಕ್ಷತೆ ಭಾವ ಹಾಗೂ ಆತ್ಮವಿಶ್ವಾಸದ ಕೊರತೆಯೇ ಈ ಪ್ರವೃತ್ತಿ ಹೆಚ್ಚಾಗಲು ಕಾರಣ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.