ADVERTISEMENT

ಇತಿಹಾಸ ಪುಟ ಸೇರಿದ ಮೈಕ್ರೋಸಾಫ್ಟ್‌ನ ಬ್ರೌಸರ್‌ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 12:34 IST
Last Updated 15 ಜೂನ್ 2022, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ:ಇಂಟರ್ನೆಟ್‌ ಬಳಕೆಯ ಆರಂಭದ ದಿನಗಳಿಂದ ಬಳಕೆದಾರರ ನೆಚ್ಚಿನ ಬ್ರೌಸರ್‌ ಆಗಿದ್ದ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಬುಧವಾರದಿಂದಲೇ ಸ್ಥಗಿತಗೊಂಡಿದೆ. 90ರ ದಶಕದಿಂದ ಸೇವೆ ಆರಂಭಿಸಿದ್ದ ಐಇ ಅಪ್ಲಿಕೇಷನ್‌ ಬರೋಬ್ಬರಿ 27 ವರ್ಷಗಳ ಕಾರ್ಯಾಚರಣೆಯ ನಂತರ ಇತಿಹಾಸದ ಪುಟ ಸೇರಿದೆ.

‘ಐಇ ಬ್ರೌಸರ್‌ ಸ್ಥಗಿತವಾಗಿದೆ. ಭವಿಷ್ಯದ ವಿಂಡೋಸ್‌ಗಳಲ್ಲಿ ‘ಮೈಕ್ರೋಸಾಫ್ಟ್‌ ಎಡ್ಜ್‌’ ಬ್ರೌಸರ್‌ ಇರಲಿದೆ’ ಎಂದು ಮೈಕ್ರೋಸಾಫ್ಟ್‌ ಕಂಪನಿ ಅಧಿಕೃತ ಹೇಳಿಕೆ ನೀಡಿದೆ.

ಹೊಸ ಬ್ರೌಸರ್‌ಗಳ ಆಗಮನವಾಗುತ್ತಿದ್ದಂತೆಯೇ, ಅವುಗಳ ಹೊಸ ಫೀಚರ್‌, ಹೊಸತನಗಳ ಎದುರು ಪೈಪೋಟಿ ನಡೆಸಲು ಐಇ ವಿಫಲವಾಗಿತ್ತು. ಕ್ರಮೇಣ ಬಳಕೆದಾರರ ಸಂಖ್ಯೆ ಕೂಡ ಕಡಿಮೆಯಾಯಿತು.

ADVERTISEMENT

‘ಮೈಕ್ರೋಸಾಫ್ಟ್ ಎಡ್ಜ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗಿಂತ ವೇಗದ, ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಆಧುನಿಕ ಬ್ರೌಸಿಂಗ್ ಅಪ್ಲಿಕೇಷನ್‌ ಆಗಿದೆ. ಇದು ಹಳೆಯ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೂ ಹೊಂದಿಕೊಳ್ಳಲಿದೆ’ಎಂದು ಮೈಕ್ರೋಸಾಫ್ಟ್ ಎಡ್ಜ್ ಎಂಟರ್‌ಪ್ರೈಸ್‌ನ ವ್ಯವಸ್ಥಾಪಕ ನಿರ್ದೇಶಕಸೀನ್ ಲಿಂಡರ್ಸೆ ಅವರು 2021ರಮೇನಲ್ಲಿ ಬ್ಲಾಗ್‌ನಲ್ಲಿ ಬರೆಯುವ ಮೂಲಕಐಇ ಯುಗಾಂತ್ಯದ ಸುಳಿವು ನೀಡಿದ್ದರು.

1995ರಲ್ಲಿ ಆರಂಭವಾದ ಐಇ 2003ರಲ್ಲಿ ಜಗತ್ತಿನ ಶೇ 93ರಷ್ಟು ಇಂಟರ್ನೆಟ್‌ ಬಳಕೆದಾರರ ನೆಚ್ಚಿನ ಬ್ರೌಸರ್‌ ಆಗಿತ್ತು. ಆ ಬಳಿಕ ಮಾರುಕಟ್ಟೆಗೆ ಪ್ರವೇಶಿಸಿದ ಹೊಸ ಬ್ರೌಸರ್‌ಗಳ ಅಬ್ಬರದ ಮುಂದೆ ಐಇ ಮಹತ್ವ ಕಳೆದುಕೊಂಡಿತು.

ಇಂಟರ್ನೆಟ್ ಅನಾಲಿಟಿಕ್ಸ್ ಕಂಪನಿ ಸ್ಟ್ಯಾಟ್‌ಕೌಂಟರ್ ಪ್ರಕಾರ,ಸದ್ಯ ಕ್ರೋಮ್ ಬ್ರೌಸರ್ ವಿಶ್ವದಾದ್ಯಂತ ಬ್ರೌಸರ್ ಮಾರುಕಟ್ಟೆಯಲ್ಲಿ ಸರಿಸುಮಾರು ಶೇ 65 ಪಾಲು ಹೊಂದಿದ್ದು, ಪ್ರಾಬಲ್ಯ ಸಾಧಿಸಿದೆ.ಆಪಲ್‌ನ ಸಫಾರಿ ಶೇ 19 ಪಾಲು ಪಡೆದಿದ್ದು, ಐಇನ ಉತ್ತರಾಧಿಕಾರಿ ಎಡ್ಜ್, ಫೈರ್‌ಫಾಕ್ಸ್‌ಗಿಂತ ಸ್ವಲ್ಪ ಮುಂದಿದ್ದು, ಶೇ 4 ಪಾಲು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.