ಬೆಂಗಳೂರು: ಆ್ಯಪಲ್ ಜಾಗತಿಕ ಆ್ಯಪ್ ಡೆವಲಪರ್‌ಗಳ ಸಮ್ಮೇಳನದಲ್ಲಿ ಹೊಸ ಓಎಸ್ ಸರಣಿಯನ್ನು ಪರಿಚಯಿಸಿದೆ. ಆ್ಯಪಲ್ ಐಪೋನ್‌ಗೆ ಹೊಸದಾಗಿ ‘ಐಓಎಸ್ 15’ ಬಿಡುಗಡೆಯಾಗಿದೆ.
ಐಓಎಸ್ 15 ಈ ಬಾರಿ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಮತ್ತು ಖಾಸಗಿತನದ ಆಯ್ಕೆಗಳನ್ನು ನೀಡುತ್ತಿದೆ.
ಫೇಸ್‌ಟೈಮ್‌ನಲ್ಲಿ ಶೇರ್‌ಪ್ಲೇ, ಸ್ಕ್ರೀನ್ ಶೇರಿಂಗ್ ಆಯ್ಕೆ, ಸ್ಪೇಶಿಯಲ್ ಆಡಿಯೊ ಫೀಚರ್‌ಗಳನ್ನು ಪರಿಚಯಿಸಲಾಗಿದೆ. ಜತೆಗೆ ಫೇಸ್‌ಟೈಮ್ ಲಿಂಕ್ ಪರಿಚಯಿಸುತ್ತಿದ್ದು, ಹಲವು ಮಂದಿ ಬಳಕೆದಾರರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಐಫೋನ್ ಬಳಕೆದಾರರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೊಂದಿರುವವರ ಜತೆಗೆ ಫೇಸ್‌ಟೈಮ್ ಕರೆ ಮಾಡಬಹುದಾಗಿದೆ.
ಮೆಸೇಜಸ್ ಮತ್ತು ಮಿಮೊಜಿ ಆಯ್ಕೆಗಳಿದ್ದು, ಗೆಳೆಯರೊಂದಿಗೆ ವಿವಿಧ ಸಂಗತಿ ಹಂಚಿಕೊಳ್ಳಲು ಅವಕಾಶವಿದೆ. ಜತೆಗೆ ಮೆಸೇಜ್, ಕರೆ, ಫೇಸ್‌ಟೈಮ್ ಎಲ್ಲವೂ ಅತ್ಯಂತ ಸುರಕ್ಷಿತ ಹಾಗೂ ಖಾಸಗಿಯಾಗಿಯೇ ಇರುತ್ತದೆ ಎಂದು ಆ್ಯಪಲ್ ಭರವಸೆ ನೀಡಿದೆ.
ಫೋಕಸ್ ಮೋಡ್, ನೋಟಿಫಿಕೇಶನ್ ಅಲರ್ಟ್, 3D ಮ್ಯಾಪ್ಸ್ ಮತ್ತು ಸಫಾರಿ ಬ್ರೌಸರ್‌ನಲ್ಲಿ ಹೊಸ ವಿಶೇಷತೆಗಳನ್ನು ಆ್ಯಪಲ್ ಪರಿಚಯಿಸಿದೆ.
ವಾಯ್ಸ್ ಸರ್ಚ್, ವ್ಯಾಲೆಟ್, ಹೆಲ್ತ್, ಆ್ಯಪ್ ಟ್ರ್ಯಾಕಿಂಗ್ ಪ್ರೈವೆಸಿ ಎನ್ನುವ ಫೀಚರ್ ಮತ್ತಷ್ಟು ಸುಧಾರಿಸಿದ್ದು, ಬಳಕೆದಾರರ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗದಂತೆ ಮತ್ತು ಇತರ ಆ್ಯಪ್‌ಗಳು ಅನಗತ್ಯವಾಗಿ ಬಳಕೆದಾರರ ವಿವರವನ್ನು ಹಿಂಬಾಲಿಸದಂತಹ ಆಯ್ಕೆಗಳನ್ನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.