ನವದೆಹಲಿ: ಚೀನಾ ಮೂಲದ ಉಪಕರಣಗಳನ್ನು ತಡೆಯುವ ಮತ್ತು ಉದ್ಯಮ ಸಹಭಾಗಿತ್ವ ಹೊಂದಿರುವ ದೇಶಗಳೊಡನೆ ವಹಿವಾಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಮಾಡುತ್ತಿದೆ.
ದೇಶದ ಎಲ್ಲ ಟೆಲಿಕಾಂ ಸೇವಾದಾರ ಕಂಪನಿಗಳು ಇನ್ನು ಮುಂದೆ ಕೇಂದ್ರ ಸರ್ಕಾರ ಅನುಮೋದಿಸಿದ ಕಂಪನಿಗಳ ಮತ್ತು ತಯಾರಕ ಉಪಕರಣವನ್ನು ಬಳಸಿಕೊಂಡು ನೆಟ್‌ವರ್ಕ್ ವಿಸ್ತರಣೆ ಮತ್ತು ಉನ್ನತೀಕರಣ, ತಾಂತ್ರಿಕ ಕೆಲಸವನ್ನು ಮಾಡಬೇಕು ಎಂದು ಆದೇಶಿಸಿದೆ.
ಸರ್ಕಾರದ ಅನುಮತಿ ಇಲ್ಲದ ಉಪಕರಣಗಳ ಬಳಕೆ ನಿಷೇಧವಾಗಿದ್ದು, ಈ ಕುರಿತ ಟೆಲಿಕಾಂ ನಿಯಮ ತಿದ್ದುಪಡಿಯನ್ನು ಬುಧವಾರ ಪ್ರಕಟಿಸಲಾಗಿದೆ. ಜೂನ್ 15ರಿಂದ ಜಾರಿಗೆ ಬರುತ್ತಿದೆ.
ಪ್ರಸ್ತುತ ದೇಶದಲ್ಲಿ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಚೀನಾ ಮೂಲದ ಕಂಪನಿಗಳೊಂದಿಗೆ ಉಪಕರಣ ಖರೀದಿ ಒಪ್ಪಂದ ಹೊಂದಿದೆ, ಜಿಯೋ ಕೊರಿಯಾ ಮೂಲದ ಸ್ಯಾಮ್‌ಸಂಗ್ ಜತೆ ಒಪ್ಪಂದ ಮಾಡಿಕೊಂಡಿದೆ.
ದೇಶದಲ್ಲಿ 5G ನೆಟ್‌ವರ್ಕ್ ಅಳವಡಿಕೆಗೂ ಮುನ್ನವೇ ಚೀನಾ ಮೂಲದ ಹುವೈ ಮತ್ತು ಝೆಡ್‌ಟಿಇ ಕಂಪನಿಗಳನ್ನು ದೂರವಿರಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.