ಅಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡುವ ಹೊತ್ತಲ್ಲಿ ಇನ್ನೇನು ಡೌನ್‌ಲೋಡ್ ಆಗುತ್ತಿದ್ದಂತೆ This app cannot be downloaded ಎಂಬ ಸಂದೇಶ ಕಾಣಿಸುತ್ತದೆ. ನೀವು ಡೌನ್‌ಲೋಡ್ ಮಾಡುತ್ತಿರುವ ಆ್ಯಪ್ ಫೈಲ್ ಗಾತ್ರ ಜಾಸ್ತಿಯಾಗಿದ್ದು, ನಿಮ್ಮ ಫೋನ್‌ನಲ್ಲಿ ಸ್ಥಳ ಇಲ್ಲದೇ ಇದ್ದರೆ ಈ ರೀತಿಯ ಸಂದೇಶಗಳು ಕಾಣಿಸಿಕೊಳ್ಳುತ್ತದೆ. ಈ ರೀತಿ ಸಂದೇಶ ಕಾಣಿಸಿಕೊಂಡರೆ ಆ್ಯಪ್ ಡೌನ್‌ಲೋಡ್ ಮಾಡುವುದಕ್ಕಾಗಿ ಹೀಗೆ ಮಾಡಿ.
ರೀಸ್ಟಾರ್ಟ್ ಮಾಡಿ
ಒಂದು ವೇಳೆ ಈ ರೀತಿಯ ಸಂದೇಶ ಕಾಣಿಸಿಕೊಂಡರೆ ನಿಮ್ಮ ಫೋನ್ ರಿಸ್ಟಾರ್ಟ್ ಮಾಡಿ, ರೀಸ್ಟಾರ್ಟ್ ಮಾಡುವುದರಿಂದ ಬಹುತೇಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಇಂಟರ್ನೆಟ್ ಸಂಪರ್ಕ ಇದೆಯೇ ಎಂದು ಪರೀಕ್ಷಿಸಿ ಕೆಲವೊಂದು ಬಾರಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡರೆ ಈ ರೀತಿಯ ಸಂದೇಶ ಕಾಣಿಸಿಕೊಳ್ಳುತ್ತದೆ. ಆ್ಯಪ್ ಡೌನ್‌ಲೋಡ್ ಮಾಡುವಷ್ಟು ಇಂಟರ್ನೆಟ್ ಡೇಟಾ ಇದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
SD ಕಾರ್ಡ್ ತೆಗೆದು ನೋಡಿ
SD ಕಾರ್ಡ್‌ನ್ನು ಹೊರ ತೆಗೆದು ಆಮೇಲೆ ಹಾಕಿ ನೋಡಿ. ಕೆಲವೊಂದು ಸಮಸ್ಯೆಗಳಿಗೆ ಇದೂ ಪರಿಹಾರವಾಗಬಲ್ಲದು. ನಿಮ್ಮ ಮೊಬೈಲ್‌ನಲ್ಲಿ ಸ್ಥಳಾವಕಾಶ ಕಡಿಮೆ ಇದ್ದರೆ, Storage ಫೋನ್‌ನಲ್ಲಿದೆಯೋ, ಎಸ್‌ಡಿ ಕಾರ್ಡ್‌ನಲ್ಲಿದೆಯೋ ಎಂಬುದನ್ನು ನೋಡಿ Storage ಸೆಟ್ಟಿಂಗ್ಸ್ ಬದಲಿಸಿ.
Flight mode ಎನೇಬವ್ ಮಾಡಿ
Flight mode ಎನೇಬಲ್ ಮಾಡಿ ಡಿಸೇಬಲ್ ಮಾಡುವುದರಿಂದಲೂ ಅಂಡ್ರಾಯ್ಡ್ ಫೋನ್‌ನಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ.
cache clear ಮಾಡಿ
ಸೆಟ್ಟಿಂಗ್ಸ್ ಓಪನ್ ಮಾಡಿ ಆಪ್ಲಿಕೇಶನ್ ಮ್ಯಾನೇಜರ್‌ನಲ್ಲಿ ಆ್ಯಪ್‌ಗಳ ಲಿಸ್ಟ್ ಇರುತ್ತದೆ ಅಲ್ಲಿ ಗೂಗಲ್ ಪ್ಲೇ ಸ್ಟೋರ್ ಆ್ಯಪ್ ಕ್ಲಿಕ್ ಮಾಡಿ, clear cache ಕ್ಲಿಕ್ಕಿಸಿ ಹೀಗೆ ಇತರ ಆ್ಯಪ್‌ಗಳ cache ಕೂಡಾ ಕ್ಲಿಯರ್ ಮಾಡಿ
Android System Webview ಅಪ್‌ಡೇಟ್ ಮಾಡಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ Android System Webview ಎಂದು ಹುಡುಕಿ. ಇದು pre installed App ಆಗಿದ್ದು, ಇದು ಅಪ್‌ಡೇಟ್ ಆಗಿಲ್ಲದಿದ್ದರೆ ಅಪ್‌ಡೇಟ್ ಮಾಡಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.