ADVERTISEMENT

ಧ್ವನಿ-ವಿಡಿಯೊ ಕರೆ ವೈಶಿಷ್ಟ್ಯ: ಡೆಸ್ಕ್‌ಟಾಪ್, ಪಿಸಿಗೂ ವಿಸ್ತರಿಸಿದ ವಾಟ್ಸ್ಆ್ಯಪ್

ಪಿಟಿಐ
Published 6 ಮಾರ್ಚ್ 2021, 4:10 IST
Last Updated 6 ಮಾರ್ಚ್ 2021, 4:10 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್ ಇದೀಗ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲೂ ಒನ್ ಟು ಒನ್ ಧ್ವನಿ ಮತ್ತು ವಿಡಿಯೊ ಕರೆಗಳ ಸೇವೆ ಆರಂಭಿಸಿರುವುದಾಗಿ ಹೇಳಿದೆ. ಈ ಮೂಲಕ ವಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಪಿಸಿಗಳ ಮೂಲಕ ಧ್ವನಿ ಮತ್ತು ವಿಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ.

ವಾಟ್ಸ್‌ಆ್ಯಪ್ ಪ್ಲಾಟ್‌ಫಾರ್ಮ್‌ನಲ್ಲಿನ ಧ್ವನಿ ಮತ್ತು ವಿಡಿಯೊ ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದ್ದರಿಂದ ಫೋನ್‌ಗಳು ಅಥವಾ ಕಂಪ್ಯೂಟರ್‌ಗಳಿಂದ ಮಾಡಲಾದ ಕರೆಗಳನ್ನು ವಾಟ್ಸ್‌ಆ್ಯಪ್‌ ಸಂಸ್ಥೆಯು ಕೇಳಲು ಅಥವಾ ನೋಡಲು ಸಾಧ್ಯವಿಲ್ಲ ಎಂದು ಫೇಸ್‌ಬುಕ್ ಒಡೆತನದ ಕಂಪನಿ ತಿಳಿಸಿದೆ.

‘ನಾವು ವಾಟ್ಸ್‌ಆ್ಯಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ವಿಡಿಯೊ ಮತ್ತು ಧ್ವನಿ ಕರೆಗಳನ್ನು ಒನ್ ಟು ಒನ್ ಮೂಲಕ ಪ್ರಾರಂಭಿಸುತ್ತಿದ್ದೇವೆ. ಆದ್ದರಿಂದ, ನಾವು ನಿಮಗೆ ವಿಶ್ವಾಸಾರ್ಹ ಮತ್ತು ಉತ್ತಮ-ಗುಣಮಟ್ಟದ ಅನುಭವವನ್ನು ನೀಡಬಹುದೆಂದು ಖಚಿತಪಡಿಸುತ್ತೇವೆ. ಭವಿಷ್ಯದಲ್ಲಿ ನಮ್ಮ ಸೇವೆಯನ್ನು ಗುಂಪು ಧ್ವನಿ ಮತ್ತು ವಿಡಿಯೊ ಕರೆಗೆ ವಿಸ್ತರಿಸುವ ವೈಶಿಷ್ಟ್ಯವನ್ನು ಪರಿಚಯಿಸುತ್ತೇವೆ’ ಎಂದು ಸಂಸ್ಥೆ ಹೇಳಿದೆ.

ADVERTISEMENT

ಕಳೆದ ವರ್ಷದಲ್ಲಿ ದೀರ್ಘ ಸಂಭಾಷಣೆ ಸೇರಿದಂತೆ ಪರಸ್ಪರ ಕರೆಗಳಿಗಾಗಿ ಜನರು ವಾಟ್ಸ್‌ಆ್ಯಪ್ ಬಳಕೆ ಮಾಡುವುದರಲ್ಲಿ ಗಮನಾರ್ಹವಾಗಿ ಹೆಚ್ಚಳ ಕಂಡುಬಂದಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.