ADVERTISEMENT

ಇನ್ಮುಂದೆ ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಬಳಸಿದರೆ ಸಿಗಲಿದೆ ಕ್ಯಾಶ್‌ಬ್ಯಾಕ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2021, 12:30 IST
Last Updated 25 ಸೆಪ್ಟೆಂಬರ್ 2021, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚೆಗೆ ತನ್ನ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಅನೇಕ ಆಯ್ಕೆಗಳನ್ನು ನೀಡಲು ಮುಂದಡಿ ಇಡುತ್ತಿದೆ. ವಾಟ್ಸ್‌ಆ್ಯಪ್‌ನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿ ಮಾಡಲು ಅದು ನಿರಂತರ ಶ್ರಮಿಸುತ್ತಿದೆ.

ಇತ್ತೀಚೆಗೆ ಯುಪಿಐ ಆಧರಿತ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದೆ. ಭಾರತದಲ್ಲಿ ‘ಗೂಗಲ್ ಪೇ’(Gpay), ‘ಫೋನ್ಪೇ’ಗೆ ಸ್ಪರ್ಧೆ ಒಡ್ಡಲು ವಾಟ್ಸ್‌ಆ್ಯಪ್‌ ಕೂಡ ತನ್ನಲ್ಲಿ ಯುಪಿಐ ಆಧರಿತ ಡಿಜಿಟಲ್ ಪೇಮೆಂಟ್‌ ಸೌಲಭ್ಯ ಕಲ್ಪಿಸಿದೆ.

ಹೊಸದಾಗಿ ಬಂದಿರುವ ಮಾಹಿತಿಗಳ ಪ್ರಕಾರ ‘ವಾಟ್ಸ್‌ಆ್ಯಪ್‌ ಪೇಮೆಂಟ್‘ ಕಡೆಯಿಂದ ಕ್ಯಾಶ್‌ಬ್ಯಾಕ್ ಅವಕಾಶ ಕೂಡ ಬಳಕೆದಾರರಿಗೆ ಸಿಗಲಿದೆ.ವಾಟ್ಸ್‌ಆ್ಯಪ್‌ ಪೇಮೆಂಟ್ ಹೆಚ್ಚಿಸಲು ಭಾರತದಲ್ಲಿ ಕ್ಯಾಶ್‌ಬ್ಯಾಕ್ ಸೌಲಭ್ಯವನ್ನುವಾಟ್ಸ್‌ಆ್ಯಪ್‌ ಪರಿಯಚಿಸುತ್ತಿದೆ ಎನ್ನಲಾಗಿದ್ದು, ಸದ್ಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ADVERTISEMENT

ಈ ಕುರಿತುWABetaInfo ಬ್ಲಾಗ್ ವರದಿ ಮಾಡಿದೆ.

ವಾಟ್ಸ್‌ಆ್ಯಪ್‌ ಪೇಮೆಂಟ್ ಹೆಚ್ಚೆಚ್ಚು ಬಳಸುವುದರಿಂದ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ನೇರವಾಗಿ ಹಾಗೂ ತುರ್ತಾಗಿ ಹಣ ಕಳಿಸಲು ಶಾರ್ಟ್‌ಕಟ್ ಚಾಟ್ ಎಂಬ ಸೌಲಭ್ಯವನ್ನು ಫೇಸ್‌ಬುಕ್ ಒಡೆತನದವಾಟ್ಸ್‌ಆ್ಯಪ್‌ ಇತ್ತೀಚೆಗೆ ಪರಿಚಯಿಸಿತ್ತು.

ಅಲ್ಲದೇ ವಾಟ್ಸ್‌ಆ್ಯಪ್ ಇನ್ನೊಂದು ಹೊಸ ಫೀಚರ್ ಪರಿಚಯಿಸುತ್ತಿದ್ದು, ಅದಕ್ಕೆWhatsApp Ban Review ಎನ್ನಲಾಗಿದೆ. ಅಂದರೆ ನಿಷೇಧಕ್ಕೊಳಗಾದ ಅಕೌಂಟ್ ಬಳಕೆದಾರರು ಈ ಫೀಚರ್ ಮೂಲಕ ತಮ್ಮ ಖಾತೆಯನ್ನು ಪುನಃ ಸ್ಥಾಪಿಸಿಕೊಳ್ಳಬಹುದಾಗಿದೆ.

ಸದ್ಯ ಇದು ಐಓಎಸ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದೆ ಆಂಡ್ರಾಯ್ಡ್‌ಗೂ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.