ADVERTISEMENT

ನಿಮ್ಮ ಇಷ್ಟದ ಸ್ಟಿಕರ್‌ಗಳನ್ನು ರಚಿಸಲು ತನ್ನಲ್ಲೇ ಅವಕಾಶ ನೀಡಲಿದೆ ವಾಟ್ಸ್‌ಆ್ಯಪ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2021, 6:55 IST
Last Updated 19 ಸೆಪ್ಟೆಂಬರ್ 2021, 6:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚೆಗೆ ತನ್ನ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಅನೇಕ ಆಯ್ಕೆಗಳನ್ನು ನೀಡಲು ಮುಂದಡಿ ಇಡುತ್ತಿದೆ. ವಾಟ್ಸ್‌ಆ್ಯಪ್‌ನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿ ಮಾಡಲು ಅದು ನಿರಂತರ ಶ್ರಮಿಸುತ್ತಿದೆ.

ಥರ್ಡ್ ಪಾರ್ಟಿ ಆ್ಯಪ್ ಮೂಲಕ (ಸ್ಟಿಕರ್ ಮೇಕರ್) ರಚನೆ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಬಳಸುವ ಸ್ಟಿಕರ್‌ಗಳು ಹೆಚ್ಚು ಜನಪ್ರಿಯ. ಈ ಸ್ಟಿಕರ್‌ಗಳ ಮೂಲಕವೂ ಬಳಕೆದಾರರು ಸಂವಹನವನ್ನು ನಡೆಸುತ್ತಿದ್ದಾರೆ. ಅದರಲ್ಲೂ ತಮ್ಮ ಇಷ್ಟದ ನಟ–ನಟಿಯರ, ಪ್ರಾಣಿ–ಪಕ್ಷಿಗಳ ಹಾಗೂ ಕಾರ್ಟೂನ್‌ಗಳ ಸ್ಟಿಕರ್‌ಗಳನ್ನು ಬಳಕೆದಾರರು ಯಥೇಚ್ಚವಾಗಿ ಬಳಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಕೂಡ ಸ್ಟಿಕರ್‌ ಮೇಕಿಂಗ್‌ ಅವಕಾಶವನ್ನು ನೀಡಲಿದೆ ಎನ್ನಲಾಗಿದ್ದು ಶೀಘ್ರದಲ್ಲೇ ಅದು ಬಳಕೆದಾರರಿಗೆ ಸಿಗಲಿದೆ. ಇದರಿಂದ ಇನ್ಮುಂದೆ ಬಳಕೆದಾರರು ಥರ್ಡ್‌ ಪಾರ್ಟಿ ಆ್ಯಪ್‌ ಉಸಾಬರಿ ಇಲ್ಲದೇ ನೇರವಾಗಿ ಇಮೇಜ್‌ಗಳನ್ನು ತಮ್ಮ ಇಷ್ಟದಂತೆ ಸ್ಟಿಕರ್‌ಗಳಾಗಿ ಬದಲಾಯಿಸಿ ಕಳಿಸಬಹುದು.

ADVERTISEMENT

ಈ ಕುರಿತುWABetaInfo ಬ್ಲಾಗ್ ವರದಿ ಮಾಡಿದೆ.

ಈ ಆಯ್ಕೆ ಆಂಡ್ರಾಯ್ಡ ಹಾಗೂ ಐಓಎಸ್‌ನಲ್ಲೂ ಲಭ್ಯವಿರಲಿದೆ ಎನ್ನಲಾಗಿದ್ದು, ಇಮೇಜ್ ಕಳಿಸುವಾಗ ಅಥವಾ ತಮ್ಮ ಇಷ್ಟದ ಇಮೇಜ್‌ನ್ನು ಸ್ಟಿಕರ್ ಆಗಿ ಬದಲಾಯಿಸಲು ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೆ ಅವಕಾಶ ಇರಲಿದೆ. ಮೇಕ್‌ ಸ್ಟಿಕರ್ ಎಂದು ಇದಕ್ಕೆ ಸೂಚಿಸಲಾಗಿದ್ದು ಇದು ಸಂದೇಶ ಕಳಿಸುವಾಗ ಬಲಭಾಗದಲ್ಲಿ ಇರಲಿದೆ ಎನ್ನಲಾಗಿದೆ.

ಅಲ್ಲದೇ ವಾಟ್ಸ್‌ಆ್ಯಪ್ ಇನ್ನೊಂದು ಹೊಸ ಫೀಚರ್ ಪರಿಚಯಿಸುತ್ತಿದ್ದು, ಅದಕ್ಕೆWhatsApp Ban Review ಎನ್ನಲಾಗಿದೆ. ಅಂದರೆ ನಿಷೇಧಕ್ಕೊಳಗಾದ ಅಕೌಂಟ್ ಬಳಕೆದಾರರು ಈ ಫೀಚರ್ ಮೂಲಕ ತಮ್ಮ ಖಾತೆಯನ್ನು ಪುನಃ ಸ್ಥಾಪಿಸಿಕೊಳ್ಳಬಹುದಾಗಿದೆ.

ಸದ್ಯ ಇದು ಐಓಎಸ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದೆ ಆಂಡ್ರಾಯ್ಡ್‌ಗೂ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.