ಬೆಂಗಳೂರು: ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ (ಹಚ್ಚೆ) ಹಾಕಿಕೊಂಡಿರುವ ಅಮೆರಿಕ ಯುವತಿಯೊಬ್ಬರು ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.
ಅಮೆರಿಕ ಸೇನೆಯ ಮಾಜಿ ಉದ್ಯೋಗಿ ಬ್ರಿಡ್ಜ್‌ಪೋರ್ಟ್ ನಿವಾಸಿ Esperance Lumineska Fuerzina ಎನ್ನುವರೇ ತಮ್ಮ ದೇಹದ ತುಂಬ ಟ್ಯಾಟೂ ಹಾಕಿಸಿಕೊಂಡಿರುವವರು.
ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡು ದೇಹವನ್ನು ಪರಿವರ್ತನೆ ಮಾಡಿಕೊಂಡಿರುವ ಬದುಕಿರುವ ಹಾಗೂ ಇತಿಹಾಸದಲ್ಲೇ ಮೊದಲ ಮಹಿಳೆ ಎಂದು ಗಿನ್ನಿಸ್ ವರ್ಲ್ಡ್ ಆಫ್ ರೆಕಾರ್ಡ್ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.
36 ವರ್ಷದ Fuerzina ದೇಹದ 89 ಭಾಗಗಳನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.
ವಿಚಿತ್ರವೆಂದರೆ Fuerzina ನಾಲಿಗೆ, ಕಣ್ಣು ಗುಡ್ಡೆ, ಒಸಡು ಹಾಗೂ ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.