ಬೆಂಗಳೂರು: ಕರಡಿಯೊಂದು ಹುಲಿಯನ್ನು ಹೆದರಿಸಿದ ಘಟನೆ ಸಫಾರಿಗೆ ಹೋದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತ ವಿಡಿಯೊವನ್ನು ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ ಗುಪ್ತಾ ಅವರು ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದದ ಫಿಲಿಬಿತ್ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಹೆಣ್ಣು ಹುಲಿಯೊಂದು ಕರಡಿಗೆ ಎದುರಾಗುತ್ತದೆ. ಪಕ್ಕದ ಕೆರೆಯಲ್ಲಿ ನೀರು ಕುಡಿದು ಸಾಗುವಾಗ ಕರಡಿ ಹುಲಿಗೆ ಬೆದರದೇ ಹುಲಿಯನ್ನೇ ಹೆದರಿಸಿದೆ.
ಇಂತಹ ಘಟನೆ ನಡೆಯುವುದು ತುಂಬಾ ವಿರಳ ಎಂದು ರಾಜೀವ್ ಕುಮಾರ್ ಗುಪ್ತಾ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.