ADVERTISEMENT

ರೀಲ್ಸ್ ಹುಚ್ಚಿಗಾಗಿ ಚಲಿಸುವ ರೈಲಿನಲ್ಲಿ ಸಾಹಸ: ಕೈ, ಕಾಲು ಕಳೆದುಕೊಂಡ ಮುಂಬೈ ಯುವಕ

ವಿಡಿಯೊವನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡಿರುವ ಮುಂಬೈ ಸೆಂಟ್ರಲ್ ರೈಲ್ವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2024, 3:18 IST
Last Updated 27 ಜುಲೈ 2024, 3:18 IST
<div class="paragraphs"><p>ಫರ್ಹಾತ್</p></div>

ಫರ್ಹಾತ್

   

ಬೆಂಗಳೂರು: ಇತ್ತೀಚೆಗೆ ರೀಲ್ಸ್ ಅಂತಹ ಶಾರ್ಟ್ ವಿಡಿಯೊಗಳ ಕ್ರೇಜ್‌ನಿಂದಾಗಿ ಅನೇಕ ಯುವಕ ಯುವತಿಯರು ಎಲ್ಲೆಂದರಲ್ಲಿ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಆಗಾಗ ವರದಿಯಾಗುತ್ತಲೇ ಇವೆ.

ಈಗ ಇಂತಹದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು, ರೀಲ್ಸ್ ವಿಡಿಯೊಗಾಗಿ ಚಲಿಸುವ ರೈಲಿನಲ್ಲಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ತನ್ನ ಎಡಗಾಲು ಹಾಗೂ ಎಡಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ.

ADVERTISEMENT

ಫರ್ಹಾತ್ ಎನ್ನುವ ಮುಂಬೈನ ಯುವಕ ರೀಲ್ಸ್ ಹುಚ್ಚು ಬೆಳೆಸಿಕೊಂಡಿದ್ದ. ಇದಕ್ಕಾಗಿ ಆತ ಚಲಿಸುವ ರೈಲಿನಲ್ಲಿ ಆಗಾಗ ಸಾಹಸ ಮಾಡುತ್ತಿದ್ದ. ಆ ವಿಡಿಯೊಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಈ ವಿಷಯ ಮುಂಬೈನ ಸೆಂಟ್ರಲ್ ರೈಲ್ವೆ ಆರ್‌ಪಿಎಫ್ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದು ವಿಡಿಯೊದಲ್ಲಿರುವವನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಹೋದಾಗ ಅಚ್ಚರಿ ಕಾದಿತ್ತು.

ಆಗ ಫರ್ಹಾತ್ ಚಲಿಸುವ ರೈಲಿನಲ್ಲಿ ರೀಲ್ಸ್ ಮಾಡಲು ಹೋಗಿ ಕೈ–ಕಾಲು ಕಳೆದುಕೊಂಡು ಮನೆಯಲ್ಲಿ ಮಲಗಿದ್ದನ್ನು ಪೊಲೀಸರು ಕಂಡುಕೊಂಡಿದ್ದಾರೆ.

‘ಇತ್ತೀಚೆಗೆ ಮಸೀದಿ ರೈಲು ನಿಲ್ದಾಣದಲ್ಲಿ ವಿಡಿಯೊಗಳಿಗಾಗಿ ಸಾಹಸ ಮಾಡುವಾಗ ನನಗೆ ಈ ಪರಿಸ್ಥಿತಿ ಬಂತು. ದಯವಿಟ್ಟು ಯಾರೂ ಶಾರ್ಟ್ ವಿಡಿಯೊ ಹುಚ್ಚಿಗಾಗಿ ತೊಂದರೆಗೆ ಸಿಲುಕಬೇಡಿ’ ಎಂದು ಪೊಲೀಸರ ಸಮ್ಮುಖದಲ್ಲಿ ನೆಟ್ಟಿಗರಿಗೆ ಮನವಿ ಮಾಡಿಕೊಂಡಿದ್ದಾನೆ.

ಈ ವಿಡಿಯೊವನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡಿರುವ ಸೆಂಟ್ರಲ್ ರೈಲ್ವೆ, ರೈಲಿನಲ್ಲಿ ಸಾಹಸಗಳನ್ನು ಮಾಡುವುದು ನಿಷಿದ್ಧ ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿ. ಯಾರಾದರೂ ಈ ರೀತಿ ಮಾಡುವುದು ಕಂಡು ಬಂದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಹಾಯವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.