ADVERTISEMENT

ಸುಲಭದಲ್ಲಿ ದೋಸೆ ತಯಾರಿಸುವ ಮಷಿನ್‌: ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರಾ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 6:48 IST
Last Updated 14 ನವೆಂಬರ್ 2024, 6:48 IST
<div class="paragraphs"><p>ದೋಸೆ ತಯಾರಿಸುವ ಮಷಿನ್‌</p></div>

ದೋಸೆ ತಯಾರಿಸುವ ಮಷಿನ್‌

   

ಬೆಂಗಳೂರು: ಆಧುನಿಕ ಯುಗದಲ್ಲಿ ಪ್ರತಿಯೊಂದು ಕೆಲಸಕ್ಕೂ ಯಾಂತ್ರಿಕ ಸಾಧನಗಳು ಕಾಲಿಟ್ಟಿವೆ. ಸಮಯ, ಶಕ್ತಿ ಉಳಿಸುವ ಸಾಧನಗಳು ಜೀವನದ ಭಾಗವಾಗಿಬಿಟ್ಟಿವೆ. ಅಂತಹವುಗಳಲ್ಲಿ ದೋಸೆ ಮಷಿನ್‌ ಕೂಡ ಒಂದು. 

ಹೆಂಚಿನ ಮೇಲೆ ದೋಸೆ ಹಿಟ್ಟು ಹಾಕಿ ಅದನ್ನು ವೃತ್ತಾಕಾರವಾಗಿ ತಿರುಗಿಸಿ, ಬೆಂದ ಮೇಲೆ ತೆಗೆಯುವುದು ಸಾಮಾನ್ಯ ವಿಧಾನ. ಆದರೆ ದೋಸೆ ಮಷಿನ್‌ನಲ್ಲಿ ಹಿಟ್ಟು ಹಾಕಿಟ್ಟರೆ ಅದಾಗಿಯೇ ದೋಸೆ ಎರೆದು, ಸುರಳಿ ಸುತ್ತಿ ಕೊಡುತ್ತದೆ. ಇದರಿಂದ ಸಮಯ, ಶ್ರಮ ಎರಡೂ ಉಳಿತಾಯವಾಗುತ್ತದೆ. 

ADVERTISEMENT

ಉದ್ಯಮಿ ಆನಂದ್‌ ಮಹೀಂದ್ರಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪಟ್ನಾದ ಕಾಲೇಜು ಬಳಿ ಇರುವ ದೋಸಾ ಮಷಿನ್‌ನ ವಿಡಿಯೊ ಹಂಚಿಕೊಂಡಿದ್ದಾರೆ. ‘ಡೆಸ್ಕ್‌ಟಾಪ್‌ ದೋಸಾ’ ಎಂದು ವಿಡಿಯೊಗೆ ಕ್ಯಾಪ್ಷನ್‌ ನೀಡಿದ್ದಾರೆ. 

ದೋಸೆ ಪ್ರಿಂಟಿಂಗ್‌ ಅಥವಾ ದೋಸೆ ಮಷಿನ್‌ ಮಾರುಕಟ್ಟೆಗೆ ಬಂದು ವರ್ಷಗಳೇ ಕಳೆದಿವೆ, ಇತ್ತೀಚೆಗೆ ಹೊಟೇಲ್‌ಗಳಲ್ಲೂ ದೋಸೆ ಮಷಿನ್‌ ಕಾರ್ಯನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.