ADVERTISEMENT

ಕೊರೊನಾ ಅಂತ್ಯದ ಘೋಷಣೆಯಾದರೆ ಈ ನಾಯಿಯಂತೆ ಎಗರಿ ಬೀಳುತ್ತೇನೆ: ಆನಂದ್‌ ಮಹೀಂದ್ರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 7:39 IST
Last Updated 10 ಜೂನ್ 2021, 7:39 IST
ವಿಡಿಯೊದಲ್ಲಿರುವ ಹಾರಿ ಕೆಳಗೆ ಬಿದ್ದ ನಾಯಿ
ವಿಡಿಯೊದಲ್ಲಿರುವ ಹಾರಿ ಕೆಳಗೆ ಬಿದ್ದ ನಾಯಿ   

ಕಳೆದ ವರ್ಷದಿಂದ ಕೊರೊನಾ ವೈರಸ್‌ ಸಹಜ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ವಾಸಿ ಮಾಡಿಕೊಳ್ಳಬಹುದಾದ ಸೋಂಕು ಎಂಬುದಕ್ಕೆ ಬೇಕಾದಷ್ಟು ಪುರಾವೆಗಳು ಸಿಕ್ಕಿದರೂ ಜನ ಭಯದಿಂದಲೇ ದಿನದೂಡುತ್ತಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರಗಳು ಹೇರುತ್ತಿರುವ ಲಾಕ್‌ಡೌನ್‌ ಮತ್ತು ಕಠಿಣ ನಿಯಮಗಳು ಕೂಡ ಜನಸಾಮಾನ್ಯರಿಗೆ ಶಿಕ್ಷೆಯಾಗಿ ಪರಿಣಮಿಸಿದೆ.ಆದರೆ ಕೇವಲ ಜನಸಾಮಾನ್ಯರ ಸ್ಥಿತಿ ಮಾತ್ರ ಸಂಕಷ್ಟದಲ್ಲಿದೆ ಎಂದುಕೊಂಡವರಿಗೆ ಮಹೀಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ ಮಹೀಂದ್ರ ಪೋಸ್ಟ್‌ ಮಾಡಿರುವ ವಿಡಿಯೊ ತುಸು ಸಮಾಧಾನವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ನಕ್ಕು ಹಗುರಾಗುವಷ್ಟು ಸಖತ್‌ ದೃಶ್ಯವಿದೆ. ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಆನಂದ ಮಹೀಂದ್ರ ಟ್ವಿಟರ್‌ ಮೂಲಕ ಪರೋಕ್ಷವಾಗಿ ಪ್ರಸ್ತುತ ಪಡಿಸಿದ್ದಾರೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೊವೊಂದನ್ನು ಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರ, 'ಅವರು ಫುಟ್ಬಾಲ್‌ ಪಂದ್ಯವನ್ನು ನೋಡುತ್ತಿದ್ದಿರಬೇಕು ಎಂದು ಊಹಿಸಿದ್ದೇನೆ. ಆದರೆ ಟಿವಿಯಲ್ಲಿ ಯಾರಾದರು ಕೊರೊನಾ ಸೋಂಕು ಅಂತ್ಯಗೊಂಡಿದೆ ಎಂದು ಘೋಷಿಸಿದರೆ ನಾನೂ ಹೀಗೆ ಉದ್ವೇಗದಿಂದ ಎಗರಿ ಬೀಳುತ್ತೇನೆ' ಎಂದು ಬರೆದಿದ್ದಾರೆ.

ADVERTISEMENT

ವಿಡಿಯೊದಲ್ಲಿ ಯುವತಿ ಮತ್ತು ನಾಯಿ ಏನನ್ನೊ ನೋಡುತ್ತ ಕುಳಿತಿರುವ ದೃಶ್ಯವಿದೆ. ಇಬ್ಬರು ಫುಟ್ಬಾಲ್‌ ಪಂದ್ಯದ ರೋಚಕ ಕ್ಷಣಗಳ ವಿವರಣೆ ಕೇಳುತ್ತಿದ್ದು, ಅಂತಿಮವಾಗಿ ಗೋಲ್‌ ಎಂದು ಚೀರಿದಾಗ ನಾಯಿಯೂ ಹರ್ಷದಿಂದ ಕುಳಿತಲ್ಲಿಂದ ಕುಪ್ಪಳಿಸುವಾಗ ಸೋಫಾದಿಂದ ಕೆಳಗೆ ಬಿದ್ದ ದೃಶ್ಯ ನಗು ತರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.