ADVERTISEMENT

ಮಾನವೀಯತೆ ಇನ್ನೂ ಇದೆ, ಇದು ನಮ್ಮ ಹೆಮ್ಮೆಯ ಭಾರತ: ಆನಂದ್ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2021, 13:07 IST
Last Updated 10 ಆಗಸ್ಟ್ 2021, 13:07 IST
   

ಬೆಂಗಳೂರು: ಮಹೀಂದ್ರಾ ಆಂಡ್ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರಿಯರಾಗಿರುವ ವ್ಯಕ್ತಿ. ಅಲ್ಲದೆ, ಸಮಾಜದಲ್ಲಿನ ವಿವಿಧ ಆಗುಹೋಗುಗಳಿಗೆ ಅವರು ಸ್ಪಂದಿಸುತ್ತಾ ಇರುತ್ತಾರೆ.

ಈ ಬಾರಿ ಆನಂದ್ ಮಹೀಂದ್ರಾ ಅವರು, ಟಿಂಕು ವೆಂಕಟೇಶ್ ಎಂಬವರು ಕಳುಹಿಸಿದ ವಿಡಿಯೊ ಒಂದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹಳ್ಳಿಯೊಂದರಲ್ಲಿ ಕೆಲವು ತರಕಾರಿಗಳನ್ನು ಇರಿಸಿಕೊಂಡು ಮಾರಾಟ ಮಾಡುತ್ತಿರುವ ಮಹಿಳೆ ಬಳಿ ಬಂದಿರುವ ನವಿಲು ಒಂದಕ್ಕೆ ಆಕೆ ಆಹಾರ ನೀಡುವ ವಿಡಿಯೊ ಇದಾಗಿದೆ. ಮಹಿಳೆ ಬಳಿ ಬಂದಿರುವ ನವಿಲು, ಸ್ವಲ್ಪವೂ ಹೆದರದೇ ಆಕೆ ಕೊಟ್ಟ ಆಹಾರ-ಕಾಳುಗಳನ್ನು ತಿನ್ನುತ್ತದೆ. ತಿಂದಾದ ಬಳಿಕ ಅಲ್ಲಿಂದ ಹೋಗುತ್ತದೆ.

ADVERTISEMENT

ಈ ವಿಡಿಯೊವನ್ನು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಇದೆ, ಮತ್ತು ಭೂಮಿಯಲ್ಲಿ ಸೌಹಾರ್ದತೆ ಇದೆ, ಇದು ನಮ್ಮ ಭವ್ಯ ಭಾರತ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.