ADVERTISEMENT

ರಾಹುಲ್ ಕಚೇರಿಯಲ್ಲಿ ಔರಂಗಜೇಬ್ ಚಿತ್ರ, ಇದು ಫೋಟೊಶಾಪ್ ಕರಾಮತ್ತು! 

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 10:01 IST
Last Updated 18 ಜುಲೈ 2018, 10:01 IST
   

ಬೆಂಗಳೂರು: ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯವರ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.ರಾಹುಲ್ ಗಾಂಧಿಯವರು ಪಕ್ಷದ ನಾಯಕರೊಂದಿಗೆ ಕುಳಿತು ಸಹಿ ಹಾಕುತ್ತಿರುವ ಚಿತ್ರ ಅದಾಗಿದ್ದು, ಆ ಕೋಣೆಯಲ್ಲಿ ಔರಂಗಜೇಬ್ ಚಿತ್ರ ತೂಗುಹಾಕಿರುವುದು ಚರ್ಚೆಗೆ ಕಾರಣವಾಗಿತ್ತು.

हिंदुत्व को बचाना है भगवा लाना है Mission 2024 Successfull ಎಂಬ ಫೇಸ್‍ಬುಕ್ ಪುಟದಲ್ಲಿ ಈ ಫೋಟೊ ಜೂನ್ 27ರಂದು ಅಪ್‍ಲೋಡ್ಆಗಿದ್ದು, ಈ ದೇಶಭಕ್ತರು ಅದ್ಯಾವ ದೇಶಭಕ್ತನ ಫೋಟೊ ಹಾಕಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿತ್ತು. ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಹುಲ್ ಗಾಂಧಿ ಬಗ್ಗೆ ಟೀಕಾ ಪ್ರಹಾರಗಳೂ ನಡೆದಿದ್ದವು. ಪ್ರಸ್ತುತ ಫೇಸ್‍ಬುಕ್ ಪುಟದಿಂದ ಆ ಫೋಟೊ ಇಲ್ಲಿಯವರೆಗೆ 12,742 ಬಾರಿಶೇರ್ ಆಗಿದೆ.
We Support Namo नरेंद्र मोदी. ಎಂಬ ಫೇಸ್‍ಬುಕ್ ಪುಟದಲ್ಲಿಯೂ ಈ ಫೋಟೊ ಶೇರ್ ಆಗಿದೆ.

ಈ ವೈರಲ್ ಫೋಟೊ ಹಿಂದಿನ ಸತ್ಯ ಸಂಗತಿ ಏನೆಂಬುದನ್ನು ಆಲ್ಟ್ ನ್ಯೂಸ್ ವರದಿ ವರದಿ ಮಾಡಿದೆ.

ADVERTISEMENT
ಫೋಟೊ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್

ಗೂಗಲ್ ರಿವರ್ಸ್ ಇಮೇಜ್‍ನಲ್ಲಿ ಸರ್ಚ್ ಮಾಡಿದಾಗ ರಾಹುಲ್ ಗಾಂಧಿಯವರು ಸಹಿ ಹಾಕುತ್ತಿರುವಫೋಟೊ ಸಿಕ್ಕಿದೆ. ಡಿಸೆಂಬರ್ 4, 2017ರಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರಲ್ಲಿ ಈ ಚಿತ್ರ ಪ್ರಕಟವಾಗಿತ್ತು. ಅದರಲ್ಲಿ ರಾಹುಲ್ ಕಚೇರಿ ಕೋಣೆಯಲ್ಲಿ ತೂಗು ಹಾಕಿದ ಫೋಟೊ ಮಹಾತ್ಮ ಗಾಂಧಿಯದ್ದಾಗಿತ್ತು.ಆದರೆ ಫೋಟೊಶಾಪ್ ವೀರರುಮಹಾತ್ಮ ಗಾಂಧಿಯ ಫೋಟೊ ಬದಲು ಔರಂಗಜೇಬ್ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.