ADVERTISEMENT

ಮೊಟ್ಟೆಗಳ ರಕ್ಷಣೆಗೆ ಹಾವಿನ ಜೊತೆಗೆ ಹಕ್ಕಿಗಳ ಸೆಣೆಸಾಟ: ವಿಡಿಯೊ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 7:20 IST
Last Updated 6 ಫೆಬ್ರುವರಿ 2022, 7:20 IST
ಹಾವಿನ ವಿರುದ್ಧ ಹೋರಾಡುತ್ತಿರುವ ಹಕ್ಕಿಗಳು
ಹಾವಿನ ವಿರುದ್ಧ ಹೋರಾಡುತ್ತಿರುವ ಹಕ್ಕಿಗಳು   

ಮೊಟ್ಟೆಗಳನ್ನು ಕದಿಯಲು ಮರವನ್ನು ಏರಿ, ಗೂಡಿನೊಳಗೆ ತಲೆ ಹಾಕುತ್ತಿರುವ ಹಾವಿನ ಜೊತೆಗೆ ಹಕ್ಕಿಯ ಸೆಣೆಸಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

'ನೇಚರ್‌27_12' ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಹಾವು ಮತ್ತು ಹಕ್ಕಿಗಳ ಕಾದಾಟದ ವಿಡಿಯೊ ಹಂಚಿಕೊಳ್ಳಲಾಗಿದ್ದು, ಪುಟಾಣಿ ಹಕ್ಕಿಗಳ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಮರದ ಕೊಂಬೆಗೆ ಹಕ್ಕಿಗಳು ಕಟ್ಟಿದ್ದ ಗೂಡುಗಳ ಬಳಿಗೆ ಲಗ್ಗೆಯಿಡುವ ಹಾವು, ಮೊಟ್ಟೆ ಅಥವಾ ಮರಿಗಳನ್ನು ನುಂಗಲು ಹವಣಿಸುತ್ತಿದೆ. ಗೂಡಿನೊಳಗೆ ತಲೆ ಹಾಕುತ್ತಿದ್ದಂತೆ ಇತ್ತ ಹಕ್ಕಿಗಳು ಹಾವಿನ ಮೇಲೆ ಎರಗುತ್ತಿವೆ. ಅವುಗಳನ್ನು ಬೆದರಿಸಲು ತಲೆ ಹೊರಗೆ ಹಾಕಿದಂತೆ ಹಕ್ಕಿಗಳು ದೂರ ಹಾರುತ್ತಿವೆ.

ADVERTISEMENT

ಹಕ್ಕಿಗಳ ದಾಳಿಗೆ ಕಂಗೆಟ್ಟ ಹಾವು ಅವುಗಳ ಗೂಡನ್ನು ಬಿಟ್ಟು ಮತ್ತೊಂದು ಗೂಡಿನತ್ತ ತೆರಳುವುದು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.