ADVERTISEMENT

Video | ಆಂಧ್ರಪ್ರದೇಶ: ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ಎತ್ತಿಕೊಂಡು ಓಡಿದ ಜನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2024, 14:06 IST
Last Updated 10 ಸೆಪ್ಟೆಂಬರ್ 2024, 14:06 IST
<div class="paragraphs"><p>ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ಎತ್ತಿಕೊಂಡು ಓಡಿದ ಜನ!</p></div>

ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ಎತ್ತಿಕೊಂಡು ಓಡಿದ ಜನ!

   

ಅಮರಾವತಿ: ಓಯ್‌.. ಒಯ್‌.. ಎಂದು ಕೂಗುತ್ತಿರುವ ಪೊಲೀಸರು, ಜೇನುಗೂಡಿಗೆ ಮುತ್ತಿಕೊಂಡ ಜೇನುಹುಳುಗಳಂತೆ ಮುಗಿಬಿದ್ದು ಮದ್ಯದ ಬಾಟಲಿಗಳನ್ನು ಎತ್ತಿಕೊಳ್ಳುತ್ತಿರುವ ಜನರು.. ಈ ದೃಶ್ಯ ಕಂಡುಬಂದಿದ್ದು ಆಂಧ್ರಪ್ರದೇಶದ ಅಮರಾವತಿ ಬಳಿಯ ಗುಂಟೂರು ಗ್ರಾಮದಲ್ಲಿ. 

ಪೊಲೀಸ್‌ ಅಧಿಕಾರಿಗಳು ಸುಮಾರು ₹ 50 ಲಕ್ಷ ಮೌಲ್ಯದ ಅಕ್ರಮ ಮದ್ಯದ ಬಾಟಲಿಗಳನ್ನು ನಾಶಮಾಡುತ್ತಿದ್ದರು. ಈ ವೇಳೆ ಮುಗಿಬಿದ್ದ ಜನ ಜೋಡಿಸಿಟ್ಟ ಮದ್ಯದ ಬಾಟಲಿಗಳು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದ್ದಾರೆ. 

ADVERTISEMENT

ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜೆಸಿಬಿಯಲ್ಲಿ ಮದ್ಯದ ಬಾಟಲಿಗಳನ್ನು ನಾಶಪಡಿಸಲು ಜೋಡಿಸಿಟ್ಟ ವೇಳೆ ಮುಗಿಬಿದ್ದ ಜನ ಬಾಟಲಿಗಳನ್ನು ಹಿಡಿದು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.