ಅಹಮದಾಬಾದ್: ಹೊರಗಿನ ಆಹಾರಗಳಲ್ಲಿ ಸತ್ತ ಪ್ರಾಣಿಗಳು ದೊರೆಯುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ವರದಿಯಾಗುತ್ತಿವೆ.
ಈ ಬಾರಿ ಅಹಮದಾಬಾದ್‌ನ ಹೋಟೆಲ್‌ವೊಂದರಲ್ಲಿ ನೀಡಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿರುವ ಬಗ್ಗೆ ಗ್ರಾಹಕರೊಬ್ಬರು ದೂರಿದ್ದಾರೆ.
‘ಅಹಮದಾಬಾದ್‌ನ ನಿಕೋಲ್ ಎನ್ನುವ ಪ್ರದೇಶದಲ್ಲಿರುವ ದೇವಿ ದೋಸಾ ರೆಸ್ಟೋರೆಂಟ್‌ನಲ್ಲಿ ನೀಡಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಸಿಕ್ಕಿದೆ. ಈ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಹಂಚಿಕೊಂಡಿದ್ದಾರೆ.
ಆ ಬಳಿಕ, ಆರೋಗ್ಯ ಇಲಾಖೆಯು ಹೋಟೆಲ್‌ನ ಮಾಲೀಕ ಅಲ್ಪೇಶ್ ಕೆವದಿಯಾ ಎನ್ನುವವರಿಗೆ ನೋಟೀಸ್ ನೀಡಿದ್ದು, ಹೋಟೆಲ್ ಅನ್ನು ಸೀಜ್ ಮಾಡಿದೆ. ಅಲ್ಲದೆ ಇಲ್ಲಿನ ಆಹಾರ ಸುರಕ್ಷಿತವಲ್ಲ ಎಂದು ಘೋಷಿಸಿದ್ದು, ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.