ಚೆನ್ನೈ: ದೀಪಾವಳಿ ಬಂತೆಂದರೆ ಸಾಕು ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಉಡುಗೊರೆ, ಬೋನಸ್ ಪಡೆಯುವ ಖುಷಿ. ಎಷ್ಟೋ ಕಂಪನಿಗಳು ತಮ್ಮ ಸಿಬ್ಬಂದಿಗೆ ಅನೇಕ ರೀತಿಯಲ್ಲಿ ಉಡುಗೊರೆಗಳನ್ನು ನೀಡುತ್ತವೆ. ಗಿಫ್ಟ್ ವೋಚರ್, ಸಿಹಿ ತಿಂಡಿಗಳನ್ನು ಹಂಚುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬ ಟೀ ಎಸ್ಟೇಟ್ ಮಾಲೀಕ ದೀಪಾವಳಿ ಉಡುಗೊರೆಯಾಗಿ15 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ತನ್ನ ಸಿಬ್ಬಂದಿಗೆ ನೀಡಿದ್ದಾರೆ.
ಹೌದು..... ನೀಲಗಿರಿ ಜಿಲ್ಲೆಯ ಕೋಟಗಿರಿ ಪಟ್ಟಣದ ಟೀ ಎಸ್ಟೇಟ್ ಮಾಲೀಕರೊಬ್ಬರು ಈ ಬಾರಿಯ ದೀಪಾವಳಿಯನ್ನು ನೆನಪಿನಲ್ಲಿಡುವಂತೆ ಆಚರಿಸಿದ್ದಾರೆ. ತಮ್ಮ ಸಿಬ್ಬಂದಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಉಡುಗೊರೆ ನೀಡುವ ಮೂಲಕ ಸಿಬ್ಬಂದಿಯ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಸ್ಟೇಟ್ ಮಾಲೀಕ ತಮ್ಮ ಸಿಬ್ಬಂದಿಗೆ ಬೈಕ್ ಕೀಯನ್ನು ವಿತರಿಸಿದ್ದಾರೆ. ತದನಂತರ ಸಿಬ್ಬಂದಿಯ ಜೊತೆಗೆ ಬೈಕ್‌ನಲ್ಲಿ ಸವಾರಿಯನ್ನು ಮಾಡಿದ್ದಾರೆ. ಮಾಲೀಕರ ಉದಾರತೆ ಕಂಡು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
‘ನಾವು ಈ ರೀತಿಯ ಉಡುಗೊರೆಯನ್ನು ನಿರೀಕ್ಷಿಸಿರಲಿಲ್ಲ. 15 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಮಾಲೀಕರು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಊಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇಂತಹ ಕಂಪನಿಯಲ್ಲಿ ಕೆಲಸ ಮಾಡಲು ನಾವೆಲ್ಲ ತುಂಬಾ ಪುಣ್ಯ ಮಾಡಿದ್ದೇವೆ. ಕೊನೆಗೂ ನಮಗೆ ಉಡುಗೊರೆ ಸಿಕ್ಕಿತು’ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಮಿಟ್ಸ್ ಹೆಲ್ತ್‌ಕೇರ್ ಎಂಬ ಫಾರ್ಮಾಸ್ಯುಟಿಕಲ್ ಕಂಪೆನಿ ತನ್ನ ಕಂಪನಿಯ ಉದ್ಯೋಗಳಿಗೆ 12 ಕಾರು ಉಡುಗೊರೆ ನೀಡಿದೆ. ಅಲ್ಲದೇ ಉದ್ಯೋಗಿಗಳನ್ನು ಸೆಲಬ್ರಿಟಿಗಳು ಎಂದು ಕರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.