ಮುಂಬೈ: ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ಸಿದ್ಧಪಡಿಸಿರುವ ಹೊಸ ಆಭರಣ ಜಾಹೀರಾತಿನ ಪ್ರಚಾರದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಬ್ಯಸಾಚಿ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬ್ರ್ಯಾಂಡ್‌ನ ಹೊಸದಾಗಿ ಪ್ರಾರಂಭಿಸಲಾದ ಮಂಗಳಸೂತ್ರಗಳನ್ನು ಪ್ರದರ್ಶಿಸುವ ಜಾಹೀರಾತು ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಲಾಗಿದೆ. ಜತೆಗೆ, ಜಾಹೀರಾತಿನ ಕೆಳ ಭಾಗದಲ್ಲಿ 'ಇಂಟಿಮೇಟ್ ಫೈನ್ ಜ್ಯುವೆಲ್ಲರಿ' ಎಂದು ಬರೆಯಲಾಗಿದೆ.
ಒಳ ಉಡುಪು ಮತ್ತು ಮಂಗಳಸೂತ್ರಗಳನ್ನು ಧರಿಸಿರುವ ಮಾಡೆಲ್‌ಗಳು ಭಿನ್ನ ಭಂಗಿಗಳಲ್ಲಿ ನಿಂತು ಜಾಹೀರಾತಿಗೆ ಪೋಸ್ ನೀಡಿದ್ದಾರೆ. ಆದರೆ ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಜಾಹೀರಾತಿನಿಂದ ಸಾರ್ವಜನಿಕರಿಗೆ ‘ಅಶ್ಲೀಲ’ ಸಂದೇಶ ರವಾನೆಯಾಗುತ್ತಿದೆ. ಇದು ಹಿಂದೂ ಸಂಸ್ಕೃತಿ ಮೇಲಿನ ದಾಳಿಯಾಗಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
‘ಸದ್ಯ ಈ ಆಭರಣಗಳನ್ನು ಯಾರೂ ಧರಿಸುವುದಿಲ್ಲ. ಅಲ್ಲದೆ ನೀವು ನಿಖರವಾಗಿ ಯಾವ ವಿಚಾರದ ಬಗ್ಗೆ ಜಾಹೀರಾತು ನೀಡುತ್ತಿದ್ದೀರಿ ಎಂಬ ಕಲ್ಪನೆ ನಿಮಗೆ ಇಲ್ಲವೆ? ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.