ADVERTISEMENT

G7 Summit: ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ದಿಟ್ಟಿಸಿ ನೋಡಿದ ಮೆಲೊನಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2024, 2:16 IST
Last Updated 16 ಜೂನ್ 2024, 2:16 IST
<div class="paragraphs"><p>ಜಾರ್ಜಿಯಾ ಮೆಲೊನಿ</p></div>

ಜಾರ್ಜಿಯಾ ಮೆಲೊನಿ

   

(ಎಕ್ಸ್ ಸ್ಕ್ರೀನ್‌ಶಾಟ್)

ನವೆದಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ವಿಡಿಯೊ ಕ್ಲಿಕ್ಕಿಸಿ ಮೆಚ್ಚುಗೆ ಗಳಿಸಿರುವ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಈಗ ಮತ್ತೊಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.

ADVERTISEMENT

ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆ ವೇಳೆ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಮೆಲೊನಿ ದಿಟ್ಟಿಸಿ ನೋಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜಾಗತಿಕ ನಾಯಕರು ಪರಸ್ಪರ ಹಸ್ತಲಾಘವ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಲ ಕ್ಷಣ ಮ್ಯಾಕ್ರನ್ ಅವರನ್ನು ದಿಟ್ಟಿಸಿ ನೋಡಿದ ಮೆಲೊನಿ, ನಂತರ ಕೈಕುಲುಕುತ್ತಾರೆ.

ಈ ವಿಡಿಯೊವನ್ನು ಸುದ್ದಿಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ.

ಕಳೆದ ದಿನವಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸೆಲ್ಫಿ ವಿಡಿಯೊವನ್ನು ಮೆಲೊನಿ ಹಂಚಿಕೊಂಡಿದ್ದರು. ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ಸೆಲ್ಫಿ ವಿಡಿಯೊವನ್ನು ಮೋದಿ ಅವರು ಹಂಚಿಕೊಂಡಿದ್ದು, ಅದಕ್ಕೆ 'ಭಾರತ–ಇಟಲಿ ಸಂಬಂಧ ಚಿರಕಾಲ ಬಾಳಲಿ' ಎಂದು ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.