ನವದೆಹಲಿ: ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಜವಳಿ ಪರಂಪರೆಯನ್ನು ಸೂಚಿಸುವ ಡೂಡಲ್ ಮೂಲಕ ದೇಶದ 77ನೇ ಸ್ವಾತಂತ್ರ್ಯ ದಿನಕ್ಕೆ ಗೂಗಲ್ ಶುಭಾಶಯ ಕೋರಿದೆ. ಡಿಜಿಟಲ್ ರೂಪದಲ್ಲಿ ಹೆಣೆದುಕೊಂಡಿರುವ ವಸ್ತ್ರವನ್ನು ಚಿತ್ರಿಸುವ ವಿಶೇಷ ಡೂಡಲ್ ಅನ್ನು ಗೂಗಲ್ ಪ್ರದರ್ಶಿಸಿದೆ.
ದೆಹಲಿ ಮೂಲದ ಕಲಾವಿದೆ ನಮ್ರತಾ ಕುಮಾರ್ ಅವರು ಈ ಕಲಾಕೃತಿಯನ್ನು ಚಿತ್ರಿಸಿದ್ದಾರೆ. ಭಾರತವು ವಿವಿಧ ರೀತಿಯ ಜವಳಿ ಶ್ರೇಣಿಯಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ ಎನ್ನುವ ಅವರು, ವೈವಿಧ್ಯಮಯ ಬಟ್ಟೆಯ ಚಿತ್ರಗಳು ಭಾರತ ಕಥೆಯನ್ನು ಹೆಣೆದಂತಿದೆ.
ಗುಜರಾತ್‌ನ ಕಚ್‌ನ ಕಸೂತಿ, ಒಡಿಶಾದ ಪಾಶ್ಮಿನಾ ಕನಿ ನೇಯ್ದ ಜವಳಿ, ಜಮ್ಮು ಮತ್ತು ಕಾಶ್ಮೀರದ ಕಾಸಾವು, ಕೇರಳದ ನೇಯ್ಗೆ ಸೇರಿದಂತೆ ಭಾರತದ ವಿವಿಧ ಪ್ರದೇಶಗಳ ವಸ್ತ್ರವಿನ್ಯಾಸವನ್ನು ಹೆಣೆದು ಅದರ ಮೇಲೆ GOOGLE ಎಂದು ಬರೆಯಲಾಗಿದೆ.
ಪ್ರಸ್ತುತ ಭಾರತದಲ್ಲಿ ಇರುವ ವೈವಿಧ್ಯಮಯ ಜವಳಿ ಕರಕುಶಲ ರೂಪಗಳನ್ನು ಸಂಶೋಧಿಸಿ ವಿಶೇಷ ಡೂಡಲ್ ರಚಿಸಲಾಗಿದೆ ಎಂದು ಗೂಗಲ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.