ADVERTISEMENT

ರೈಲಿನಲ್ಲಿ ನಮಾಜ್ ವೇಳೆ ಯುವಕರಿಂದ ಹನುಮಾನ್ ಚಾಲೀಸಾ ಪಠಣ

ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2023, 13:05 IST
Last Updated 31 ಜುಲೈ 2023, 13:05 IST
ಘಟನೆ ನಡೆದ ಸಂದರ್ಭ
ಘಟನೆ ನಡೆದ ಸಂದರ್ಭ   

ಬೆಂಗಳೂರು: ಚಲಿಸುವ ರೈಲಿನಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುವಾಗ ಕೆಲ ಯುವಕರು ಜೋರಾಗಿ ಹನುಮಾನ್ ಚಾಲೀಸಾ ಓದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು, ಇದು ಅಸಹಿಷ್ಣುತೆ ಎಂದರೆ ಇನ್ನೂ ಕೆಲವರು ಇದು ಸಾಮರಸ್ಯ, ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವು ಹಿಂದೂ ಪರ ಸಂಘಟನೆಗಳು ಯುವಕರನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಘಟನೆ ಎಲ್ಲಿ? ಯಾವಾಗ? ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು free press journal ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

ವಿಡಿಯೊದಲ್ಲಿ ಮುಸ್ಲಿಂ ವ್ಯಕ್ತಿ ರೈಲಿನ ಬೋಗಿಯೊಂದರಲ್ಲಿ ತಮ್ಮ ಪಾಡಿಗೆ ತಾವು ನಮಾಜ್ ಮಾಡುತ್ತಿರುತ್ತಾರೆ. ಇದೇ ವೇಳೆ ಕೆಲ ಹಿಂದೂ ಯುವಕರು ಜೋರಾಗಿ ಹನುಮಾನ್ ಚಾಲೀಸಾ ಹೇಳುವುದು ಕಾಣಿಸುತ್ತದೆ.

ನೋಡಿ ಇದು ನವ ಭಾರತದ ಯುವಜನತೆ! ತನ್ನ ಸೀಟಿನಲ್ಲಿ ಮೌನವಾಗಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗೆ ವಿರೋಧವಾಗಿ ಎಂಬಂತೆ, ಹಲವಾರು ಹಿಂದೂ ಯುವಕರು ಜೋರಾಗಿ ಹನುಮಾನ್ ಚಾಲೀಸಾವನ್ನು ಮೊಬೈಲ್ ಫೋನುಗಳಿಂದ ಪಠಿಸುತ್ತಿದ್ದಾರೆ ಎಂದು ಅಶೋಕ್ ಸ್ವೈನ್ ಎನ್ನುವರು ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ಹುಡುಗರು ಮುಸ್ಲಿಂ ವ್ಯಕ್ತಿ ನಮಾಜ್ ಮಾಡುತ್ತಿರುವ ಸಂದರ್ಭದಲ್ಲಿ ರೈಲಿನಲ್ಲಿ ಹನುಮಾನ್ ಚಾಲೀಸಾವನ್ನು ಜೋರಾಗಿ ಪಠಿಸುತ್ತಿರುವ ವಿಡಿಯೊ ಹರಿದಾಡಿದೆ. ಅನೇಕ ಜನರು ಈ ಘಟನೆಯಿಂದ ಸಂತೋಷವಾಗಿಲ್ಲ. ಆದರೆ ಇದು ನಿಜವಾದ ಜಾತ್ಯತೀತತೆ ಎಂದು ಆದಿತ್ಯಾ ಪೋದ್ದಾರ್ ಎನ್ನುವರು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.