ವಾಷಿಂಗ್ಟನ್: ಮಾನವನಂತೆ ಹಲ್ಲುಗಳಿರುವ ಮೀನು ಪತ್ತೆಯಾಗಿದೆ ಒಕ್ಲಾಹೊಮ ರಾಜ್ಯದಲ್ಲಿ 11 ವರ್ಷದ ಬಾಲಕನೊಬ್ಬ ಮೀನು ಹಿಡಯಲು ಹೋದಾಗ ಈ ಮೀನು ಸಿಕ್ಕಿದೆ ಎಂದು ಲೈವ್ ಸೈನ್ಸ್ ವರದಿ ತಿಳಿಸಿದೆ.
ಮಾನವನ ಹಲ್ಲಿನ ರೀತಿಯಿರುವ ಮೀನಿನ ಫೋಟೊವನ್ನು ವನ್ಯಜೀವಿ ಸಂರಕ್ಷಣಾ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಪಾಕು ಕುಟುಂಬಕ್ಕೆ ಸೇರಿದ ಈ ಮೀನಿನ ಮೂಲ ದಕ್ಷಿಣ ಆಫ್ರಿಕಾ. ಇದು ಸಸ್ಯಾಹಾರಿ ಮೀನಾಗಿದೆ. ಇವು ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದು 3.5 ಅಡಿ ಇದ್ದು 88 ಪೌಂಡ್ಸ್ ತೂಕ ಇರಲಿದೆ.
ಬಹುಮುಖ್ಯವಾಗಿ ಅವು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡುವ ವಿಲಕ್ಷಣ, ಆಕ್ರಮಣಕಾರಿ ಪ್ರಭೇದಗಳಾಗಿವೆ ಎಂದು ಇಲಾಖೆಯು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.