ಇಡುಕ್ಕಿ: ಇಡುಕ್ಕಿ ಅಣೆಕಟ್ಟಿನ5ನೇ ಶಟರ್ ತೆರೆದು ಚೆರುತೋಣಿ ನದಿಗೆ ನೀರು ಹರಿಯಬಿಟ್ಟಾಗ ರಕ್ಷಣಾ ಕಾರ್ಯದ ವೇಳೆ ಸೇತುವೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಬಾಲಕನೊಬ್ಬನನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿ ಆ ಸೇತುವೆ ದಾಟಿದ ಕೆಲವೇ ಕ್ಷಣದಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.ನ್ಯೂಸ್ 18 ಕೇರಳ ಸುದ್ದಿ ಮಾಧ್ಯಮ ಸೆರೆ ಹಿಡಿದ ವಿಡಿಯೊ ಇದಾಗಿದ್ದು, ಪೊಲೀಸ್ ಅಧಿಕಾರಿಯ ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆಯ ಸುರಿ ಮಳೆಯಾಗುತ್ತಿದೆ.
26 ವರ್ಷಗಳ ನಂತರ ಇಡುಕ್ಕಿ ಅಣೆಕಟ್ಟಿನಶಟರ್ ತೆರೆದು ನೀರು ಹೊರ ಹರಿಯಬಿಡಲಾಗಿದೆ.
ಕೇರಳದಲ್ಲಿ ಭಾರೀ ಮಳೆಯಿಂದಾಗಿ 29 ಮಂದಿ ಸಾವಿಗೀಡಾಗಿದ್ದು, ಸುಮಾರು 50,000 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.