ADVERTISEMENT

KL ರಾಹುಲ್ ವಿವಾದಾತ್ಮಕ ಔಟ್: ನೆಟ್ಟಿಗರ ಮನಗೆದ್ದ ಹು–ಧಾ ಪೊಲೀಸರ ‘ಎಕ್ಸ್’ ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2024, 12:24 IST
Last Updated 22 ನವೆಂಬರ್ 2024, 12:24 IST
<div class="paragraphs"><p>ವಿವಾದಾತ್ಮಕ ತೀರ್ಪಿಗೆ ಕಾರಣವಾದ ಎಸೆತದ ಎರಡು ಮಗ್ಗುಲುಗಳ ನೋಟ ಹಾಗೂ ಸ್ನೀಕೊ ಮೀಟರ್‌</p></div>

ವಿವಾದಾತ್ಮಕ ತೀರ್ಪಿಗೆ ಕಾರಣವಾದ ಎಸೆತದ ಎರಡು ಮಗ್ಗುಲುಗಳ ನೋಟ ಹಾಗೂ ಸ್ನೀಕೊ ಮೀಟರ್‌

   

– ಎಕ್ಸ್ ಚಿತ್ರ

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಅವರ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರ ನಡುವೆ ಭಾರಿ ಚರ್ಚೆ ಹುಟ್ಟು ಹಾಕಿದೆ.

ADVERTISEMENT

ಪಂದ್ಯದ 23ನೇ ಓವರ್‌ನಲ್ಲಿ ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ರಾಹುಲ್ ಬಲಿಯಾದರು. ಈ ವೇಳೆ ಅವರು 26ರನ್ ಗಳಿಸಿದ್ದರು.

ಮಿಚೆಲ್ ಸ್ಟಾರ್ಕ್ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು.ಬ್ಯಾಟ್‌ಗೆ ಮುಟ್ಟಿದೆ ಎನ್ನುವಷ್ಟು ಸನಿಹದಿಂದ ಸಾಗಿದ ಬಾಲ್‌ ಕೀಪರ್‌ ಕೈ ಸೇರಿತು. ಈ ವೇಳೆ ಕೀಪರ್‌ ಮಾಡಿದ ಮನವಿಯನ್ನು ಆನ್‌ಫೀಲ್ಡ್ ಅಂಪೈರ್ ತಿರಸ್ಕರಿಸಿದರು. ಹೀಗಾಗಿ ಆಸ್ಟ್ರೇಲಿಯಾ ತಂಡ ಮೇಲ್ಮನವಿ ಸಲ್ಲಿಸಿತು.

ಪರಿಶೀಲನೆ ವೇಳೆ ಸ್ನೀಕೊ ಮೀಟರ್‌ನಲ್ಲಿ ಏರಿಳಿತ ಕಂಡು ಬಂತು. ಆದರೆ ಮತ್ತೊಂದು ಕೋನದಲ್ಲಿ ಚೆಂಡು ಬ್ಯಾಟಿಗೆ ತಾಗದಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಬ್ದ ಬ್ಯಾಟ್‌ನದ್ದೋ, ಪ್ಯಾಡ್‌ನದ್ದೋ ಎಂದು ನಿರ್ಣಯಕ್ಕೆ ಬರಲಾಗದೆ ಕೊನೆಗೆ ಮೂರನೇ ಅಂಪೈರ್‌ ಔಟ್ ಎಂದು ತೀರ್ಪು ನೀಡಿದರು.

ಇದು ಭಾರಿ ವಿವಾದಕ್ಕೆ ಕಾರಣವಾಯಿತು. ಕ್ರಿಕೆಟ್ ದಿಗ್ಗಜರು ಹಾಗೂ ಅಭಿಮಾನಿಗಳು ಈ ತೀರ್ಪನ್ನು ಕಟು ಮಾತುಗಳಿಂದ ಟೀಕಿಸಿದ್ದಾರೆ. ತಂತ್ರಜ್ಞಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಹುಬ್ಬಳ್ಳಿ– ಧಾರವಾಡ ನಗರ ಪೊಲೀಸರ ಎಕ್ಸ್ ಪೋಸ್ಟ್ ಗಮನ ಸೆಳೆದಿದೆ.

‘ಬ್ಯಾಟ್ ಹಾಗೂ ಬಾಲ್ ನಡುವಿನ ಅಂತರ ಕಾಣಿಸದಿದ್ದರೆ ದಯಮಾಡಿ ಇಂದು ರಾತ್ರಿ ರಸ್ತೆಯಲ್ಲಿ ವಾಹನ ಚಲಾಯಿಸಬೇಡಿ’ ಎಂದು ಹಾಸ್ಯಾತ್ಮಕ ಬರೆದುಕೊಂಡಿದೆ.

ಅದಕ್ಕೆ ಟಿ.ವಿ ರೀಪ್ಲೆಯ ಚಿತ್ರವನ್ನೂ ಬಳಸಲಾಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಥರಹೇವಾರಿ ಕಮೆಂಟ್‌ಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.