ADVERTISEMENT

Video: ಆಟವಾಡುತ್ತಿದ್ದ ಮಕ್ಕಳನ್ನು ಹಾವಿನಿಂದ ಕಾಪಾಡಿದ ಪಿಟ್ ಬುಲ್ ನಾಯಿ

ಪಿಟ್ ಬುಲ್ ನಾಯಿಯೊಂದು ನಾಗರಹಾವಿನಿಂದ ಬಾಲಕಕನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇತ್ತೀಚೆಗೆ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2024, 14:24 IST
Last Updated 25 ಸೆಪ್ಟೆಂಬರ್ 2024, 14:24 IST
<div class="paragraphs"><p>ಆಟವಾಡುತ್ತಿದ್ದ ಮಕ್ಕಳನ್ನು ಹಾವಿನಿಂದ ಕಾಪಾಡಿದ ಪಿಟ್ ಬುಲ್ ನಾಯಿ</p></div>

ಆಟವಾಡುತ್ತಿದ್ದ ಮಕ್ಕಳನ್ನು ಹಾವಿನಿಂದ ಕಾಪಾಡಿದ ಪಿಟ್ ಬುಲ್ ನಾಯಿ

   

ಬೆಂಗಳೂರು: ಪಿಟ್ ಬುಲ್ ನಾಯಿಯೊಂದು ನಾಗರಹಾವಿನಿಂದ ಮಕ್ಕಳನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇತ್ತೀಚೆಗೆ ನಡೆದಿದೆ.

ಮನೆಯ ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳ ಬಳಿ ನಾಗರಹಾವೊಂದು ಹರಿದು ಬಂದಿತ್ತು. ಈ ವೇಳೆ ಪಿಟ್ ಬುಲ್ ನಾಯಿ ಆ ಹಾವಿನ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿ ಅದನ್ನು ಸಾಯಿಸಿದೆ. ಈ ವಿಡಿಯೊ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

ಝಾನ್ಸಿಯ ಶಿವ ಗಣೇಶ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಘಟನೆ ಬಗ್ಗೆ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿರುವ ನಾಯಿ ಮಾಲೀಕ, ‘ನಮ್ಮ ಜೆನ್ನಿ ಎನ್ನುವ ಪಿಟ್ ಬುಲ್ ನಾಯಿ ಹಾವಿನ ಜೊತೆ ಹೋರಾಡುವುದು ಇದೇ ಮೊದಲಲ್ಲ. ಈ ಮೊದಲು 8 ಬಾರಿ ಹಾವನ್ನೇ ಕಚ್ಚಿದೆ. ಮೊನ್ನೆ ನಡೆದ ಘಟನೆ ಅತ್ಯಂತ ವಿಷಕಾರಿ ಹಾವು. ನಾಯಿಗೆ ಏನೂ ಆಗಿಲ್ಲ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.