ಬೆಂಗಳೂರು: ಸಾಮಾನ್ಯವಾಗಿ ವಿಪರೀತ ಮಳೆಯಿಂದ ಕಾಲುವೆ, ನದಿ ಹಳ್ಳ–ಕೊಳ್ಳಗಳು ತುಂಬಿ ಹರಿಯುವುದನ್ನು ನೋಡಿರುತ್ತೇವೆ. ಮಳೆಯಿಂದ ರಸ್ತೆಗಳೂ ಪ್ರವಾಹದ ರೂಪದಲ್ಲಿ ನೋಡಿದ್ದೇವೆ.
ಆದರೆ, ಪೋರ್ಚುಗಲ್‌ನಲ್ಲಿ ಊರೊಂದರ ರಸ್ತೆಗಳಲ್ಲಿ ಕೆಂಪು ವೈನ್, ನದಿಯಂತೆ ಪ್ರವಾಹ ಸದ್ರಶ್ಯವಾಗಿ ಹರಿದಿರುವ ಅಪರೂಪದ ಘಟನೆ ನಡೆದಿದೆ.
ಈ ಕುರಿತ ವಿಡಿಯೊ ಸಾಮಾಜಿಜ ಜಾಲತಾಣದಲ್ಲಿ ಹರಿದಾಡಿದ್ದು, ಭಾರಿ ಪ್ರಮಾಣದ ವೈನ್ ರಸ್ತೆ ಪಾಲಾಗಿದೆ.
ಪೋರ್ಚುಗಲ್‌ನ Anadia ಪ್ರಾಂತ್ಯದ Sao Lorenco de Bairro ಎಂಬ ಊರಿನಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ.
ವೈನ್ ಕಾರ್ಖಾನೆಯೊಂದರಲ್ಲಿ ಸ್ಪೋಟವಾಗಿದ್ದ ಬ್ಯಾರಲ್‌ಗಳು ಒಡೆದು ಸುಮಾರ 22 ಲಕ್ಷ ಲೀಟರ್ ವೈನ್ ಚೆಲ್ಲಿ, ರಸ್ತೆಯಲ್ಲಿ ನದಿಯಂತೆ ಹರಿದಿದೆ. ಸ್ಥಳೀಯಾಡಳಿತದವರು ಕೂಡಲೇ ಎಚ್ಚೆತ್ತುಕೊಂಡು ವೈನ್ ನದಿ, ಹೊಲ–ಗದ್ದೆಗಳನ್ನು ಸೇರದಂತೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.