ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಇತ್ತೀಚೆಗೆ ಬೆಂಗಳೂರಿನ 'ಥರ್ಡ್ ವೇವ್ ಕಾಫಿ' ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸುನಕ್ ಅವರು ಕೌಂಟರ್‌ನಲ್ಲಿ ಆರ್ಡರ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಕೆಫೆಯಲ್ಲಿದ್ದ ಜನರೊಂದಿಗೆ ಖುಷಿಯಿಂದ ಸೆಲ್ಫಿಗೂ ಪೋಸ್ ಕೊಟ್ಟಿದ್ದಾರೆ.
ಫೋಟೋಗಳಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ‘ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಸುನಕ್ 70 ಗಂಟೆ ಕೆಲಸ ಮಾಡುತ್ತಿರಬಹುದು’ ಎಂದು ಇನ್ಫೋಸಿಸ್ ಜೊತೆಗೆ ಅವರಿಗೆ ಇರುವ ನಂಟನ್ನು ಉಲ್ಲೇಖಿಸಿ ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ
ಇದಕ್ಕೂ ಮುನ್ನ ರಿಷಿ ಸುನಕ್, ಪತ್ನಿ ಮತ್ತು ಅತ್ತೆ ಸುಧಾ ಮೂರ್ತಿ ಅವರೊಂದಿಗೆ ಬೆಂಗಳೂರಿನ ಜಯನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ್ದರು.
ಭಾರತ ಮೂಲದ ರಿಷಿ ಸುನಕ್, 2022 ರಿಂದ 2024ರ ವರೆಗೆ 20 ತಿಂಗಳ ಕಾಲ ಬ್ರಿಟನ್ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಅವರು ತಮ್ಮ ಪತ್ನಿಯೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.