ಮಾಸ್ಕೋ: ರಷ್ಯಾದ ಉದ್ಯಮಿಯೊಬ್ಬರು ವಾಣಿಜ್ಯ ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ. ಫೆಲಿಕ್ಸ್ ಡೆಮಿನ್ ಎನ್ನುವ ವ್ಯಕ್ತಿ ಸಂಚಾರಕ್ಕೆ ಬಳಸದ ಬೋಯಿಂಗ್ 737 ವಿಮಾನವನ್ನು ಐಷಾರಾಮಿ ಖಾಸಗಿ ವಿಲ್ಲಾವನ್ನಾಗಿ ಮಾಡಿದ್ದಾರೆ.
ಈ ವಿಶಿಷ್ಟ ಮನೆಯ ವಿಡಿಯೊವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ಕೆಲವು ಜನರು ತಮ್ಮ ಕಲ್ಪನೆಗಳನ್ನು ವಾಸ್ತವಾಗಿಸಿಕೊಳ್ಳಲು ಅದೃಷ್ಟವಂತರಾಗಿರುತ್ತಾರೆ" ಎಂದು ಬರೆದುಕೊಂಡಿದ್ದಾರೆ.
ವಿಲ್ಲಾದಲ್ಲಿ ಎರಡು ಮಲಗುವ ಕೋಣೆಗಳು, ಸ್ವಿಮ್ಮಿಂಗ್ ಪೂಲ್ ಮತ್ತು ಟೆರೇಸ್, ಬಾರ್, ಸೋಫಾ ಬೆಡ್, ಲಿವಿಂಗ್ ರೂಮ್ ಮತ್ತು ನಡೆದಾಡಲು ವಿಶಾಲವಾದ ಜಾಗ ಕೂಡ ಇದೆ. ಕಾಕ್‌ಪಿಟ್ ಅನ್ನು ದೊಡ್ಡ ಸ್ನಾನಗೃಹವಾಗಿ ಪರಿವರ್ತಿಸಲಾಗಿದ್ದು, ಹೊರಾಂಗಣ ಲಾಂಜ್ ಪ್ರದೇಶ ಮತ್ತು ಅಗ್ನಿಶಾಮಕ ಸ್ಥಳವನ್ನು ಸಹ ರೂಪಿಸಲಾಗಿದೆ.
ವರದಿ ಪ್ರಕಾರ, ಬೋಯಿಂಗ್ 737 ಅನ್ನು ಡೆಮಿನ್ ಅವರು 2021 ರಲ್ಲಿ ಖರೀದಿಸಿ ಹಿಂದೂ ಮಹಾಸಾಗರದ ಪಕ್ಕದಲ್ಲಿ ಇರಿಸಿದ್ದರು. 2023 ರಲ್ಲಿ ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.