ADVERTISEMENT

ರಸ್ತೆ ಬದಿಯಲ್ಲಿ ಸಸಿ ಮಾರುವ 79 ವರ್ಷದ ಸಿದ್ದಪ್ಪಗೆ ನೆರವಾದರು ಟ್ವೀಟಿಗರು!

ಬದುಕು ಬದಲಿಸಿದ ವೈರಲ್ ಫೋಟೊ

ಏಜೆನ್ಸೀಸ್
Published 29 ಅಕ್ಟೋಬರ್ 2020, 4:12 IST
Last Updated 29 ಅಕ್ಟೋಬರ್ 2020, 4:12 IST
ರೇವಣ್ಣ ಸಿದ್ದಪ್ಪ ಅವರೊಂದಿಗೆ 'ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್' ಸದಸ್ಯರು (ಟ್ವಿಟರ್‌ ಚಿತ್ರ)
ರೇವಣ್ಣ ಸಿದ್ದಪ್ಪ ಅವರೊಂದಿಗೆ 'ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್' ಸದಸ್ಯರು (ಟ್ವಿಟರ್‌ ಚಿತ್ರ)   

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಮತ್ತೊಬ್ಬ ಹಿರಿಯ ವ್ಯಕ್ತಿಯ ಬದುಕಿಗೆ ನೆರವು ಸಿಕ್ಕಿರುವುದು ವರದಿಯಾಗಿದೆ. ವೈರಲ್ ಆದ ಫೋಟೊ 79 ವರ್ಷ ವಯಸ್ಸಿನ ರೇವಣ್ಣ ಸಿದ್ದಪ್ಪ ಅವರ‌ ನಿತ್ಯ‌ ಬದುಕಿನಲ್ಲಿ ಬದಲಾವಣೆ ತಂದಿದೆ.

ಕನಕಪುರ ರಸ್ತೆಯ ಅಂಗಡಿಯ ಮುಂದಿನ ರಸ್ತೆ ಬದಿಯಲ್ಲ ಔಷಧಿ ಸಸಿಗಳನ್ನು ಮಾರಾಟ‌ ಮಾಡುವ ಚಿತ್ರ ಟ್ವಿಟರ್ ನಲ್ಲಿ ಹರಿದಾಡಿದೆ. ನಟ ರಣದೀಪ್ ಹೂಡ ಸೇರಿದಂತೆ ಹಲವರು ಸಿದ್ದಪ್ಪ ಅವರ ಫೋಟೊ, ವಿಳಾಸ ಹಂಚಿಕೊಂಡು ನೆರವಾಗುವಂತೆ ಕೋರಿದ್ದರು.

ಪೋಸ್ಟ್ ನೋಡಿರುವ 'ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್' ಸದಸ್ಯರು, ಸಿದ್ದಪ್ಪ ಅವರಿಗೆ ಮೇಜು, ಕುರ್ಚಿ ಹಾಗೂ ಛತ್ರಿ ಒದಗಿಸಿದ್ದಾರೆ. ಅವರ ಬದುಕಿಗೆ ನೆರವಾಗಲು ಇನ್ನಷ್ಟು ಪ್ರಯತ್ನ ನಡೆಸಿದ್ದಾರೆ.

ADVERTISEMENT

'ಯಾರೋ ಚಿತ್ರ ತೆಗೆದು ಹಾಕಿದ್ದಾರೆ. ಅನಂತರ ಜನರಿಂದ ಬಹಳಷ್ಟು ಸಹಾಯ ದೊರೆತಿದೆ. ಸಸಿಗಳನ್ನು ಇಟ್ಟುಕೊಳ್ಳಲು ಮೇಜು, ಕುರ್ಚಿ, ಕೊಡೆ ಕೊಟ್ಟಿದ್ದಾರೆ. ಒಂದು ಸಸಿ ₹20-₹30ಕ್ಕೆ ಮಾರಾಟ ಮಾಡುತ್ತೇನೆ. ಮುಂಚೆ ನಾಲ್ಕೈದು ಸಸಿಗಳಷ್ಟೇ ಮಾರಾಟ ಆಗುತ್ತಿದ್ದವು, ಈಗ ಎರಡು ಮಟ್ಟಾಗಿದೆ' ಎಂದು ಸಿದ್ದಪ್ಪ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕಳೆದ ಮೂರು ವರ್ಷಗಳಿಂದ ಸಸಿಗಳ‌ ಮಾರಾಟ ಮಾಡುತ್ತಿರುವ ಅವರು ಯಾರಿಂದಲೂ ಸಾಲ ಪಡೆಯದೆ, ಸ್ವಂತ ದುಡಿಮೆಯಲ್ಲಿ ಬದುಕು ಸಾಗಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಗಲಭೆಗೂ ಕಾರಣವಾಗುವ ಸಾಮಾಜಿಕ‌ ಮಾಧ್ಯಮಗಳ ಪೋಸ್ಟ್ ಗಳು ನೆರವಿನ ಹಸ್ತ ಚಾಚಲೂ ನೆರವಾಗಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಂತಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ವೃದ್ಧ ದಂಪತಿಯ ಪುಟ್ಟ ಹೊಟೇಲ್ ಸಹ ವೈರಲ್ ಆಗಿ, ಗ್ರಾಹಕರೇ ದಂಡು ಅಲ್ಲಿಗೆ ಭೇಟಿ ನೀಡಿದ್ದನ್ನು ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.