ಬೆಂಗಳೂರು: ದೊಡ್ಡ ದೊಡ್ಡ ಸ್ಥಾನದಲ್ಲಿರುವ ಕೆಲವರು ಹೇಳುವುದು ಒಂದು, ಮಾಡುವುದು ಮತ್ತೊಂದು ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.
ಆಧ್ಯಾತ್ಮಿಕ ಭಾಷಣಕಾರ್ತಿ ಹಾಗೂ ಗಾಯಕಿ ಜಯಾ ಕಿಶೋರಿ ಎನ್ನುವರು ತಮ್ಮ ಮಾತಿಗೆ ತಾವು ಬದ್ಧರಾಗಿ ಇರದೇ ಇದೀಗ ಟೀಕೆ ಎದುರಿಸುತ್ತಿದ್ದಾರೆ.
ಹೌದು, ಜಯಾ ಕಿಶೋರಿ ಅವರು ತಮ್ಮ ಆಧ್ಯಾತ್ಮಿಕ ಭಾಷಣಗಳಲ್ಲಿ ‘ಸರಳ ಜೀವನವೇ ಸುಂದರ, ನಿಜವಾದ ಸಂತೋಷ ಬೇಕು ಎಂದರೆ ಭೌತಿಕ ಸುಖ ತ್ಯಜಿಸಬೇಕು’ ಎಂದು ಆಗಾಗ ಹೇಳುತ್ತಿರುತ್ತಾರೆ. ಆದರೆ, ಇದೇ ಜಯಾ ಕಿಶೋರಿ ಅವರು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಕೋಲ್ಕತ್ತದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಜಯಾ ಕಿಶೋರಿ ಅವರು ಡಿಯೋರ್ (dior) ಕಂಪನಿಯ ಬರೋಬ್ಬರಿ ₹2 ಲಕ್ಷ ಮೌಲ್ಯದ ಹ್ಯಾಂಡ್ ಬ್ಯಾಗ್ ಅನ್ನು ತಮ್ಮ ಜೊತೆ ಕೊಂಡೊಯ್ಯುತ್ತಿದ್ದರು.
ಈ ಚಿತ್ರವನ್ನು ಹಂಚಿಕೊಂಡು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಹಳೆಯ ವಿಡಿಯೊಗಳ ಜೊತೆ ಐಷಾರಾಮಿ ಬ್ಯಾಗ್ ಇರುವ ವಿಡಿಯೊ ಹಾಕಿಕೊಂಡು ಟೀಕಿಸಿದ್ದಾರೆ.
ಹೇಳಿದಂತೆ ನಡೆದುಕೊಳ್ಳದಿದ್ದರೇ ನಿಮ್ಮ ಮಾತಿಗೆ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 27 ವರ್ಷದ ಜಯಾ ಕಿಶೋರಿ ಅವರು ತಮ್ಮ ಆಧ್ಯಾತ್ಮಿಕ ಭಾಷಣದಿಂದ ಹಾಗೂ ಶ್ರೀಕೃಷ್ಣನ ಭಜನೆಗಳಿಂದ ಉತ್ತರ ಭಾರತದಲ್ಲಿ ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.