ಇಸ್ತಾಂಬುಲ್ (ಟರ್ಕಿ): ಬಹುಮಹಡಿ ವಸತಿ ಸಮುಚ್ಛಯದ ಕಿಟಿಕಿಯೊಂದರಿಂದ ಕೆಳಗೆ ಬೀಳುತ್ತಿದ್ದ ಹೆಣ್ಣು ಮಗುವೊಂದನ್ನು ರಸ್ತೆಯಲ್ಲಿ ನಿಂತಿದ್ದ ಯುವಕನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇಸ್ತಾಂಬುಲ್ಫತೀಹಾ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೋಹಾ ಮೊಹಮ್ಮದ್ ಎಂಬ ಮಗು ಕಟ್ಟಡದ ಎರಡನೇ ಮಹಡಿಯಿಂದ ಬೀಳುತ್ತಿರುವುದನ್ನು ಗಮನಿಸಿದ 17ರ ಹರೆಯದ ಫೆವುಜಿ ಜಬಾತ್ ಸುರಕ್ಷಿತವಾಗಿ ಕ್ಯಾಚ್ ಹಿಡಿದಿದ್ದಾರೆ. ಜಬಾತ್ ಮಗುವನ್ನು ಹಿಡಿದು ರಕ್ಷಿಸಿದಾಗಲೇ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದ್ದು.
ನಾನು ಆ ಕ್ಷಣಕ್ಕೆ ಏನು ಮಾಡಬೇಕೋ ಅದನ್ನು ಮಾಡಿದೆ, ಇದೆಲ್ಲ ದೇವರ ಕೃಪೆ ಅಂತಾರೆ ಜಬಾತ್.
ಸ್ಥಳೀಯ ಮಾಧ್ಯಮಗಳ ಪ್ರಕಾರ ದೋಹಾ ಕಿಟಿಕಿಯಿಂದ ಹೊರಗೆ ಇಣುಕಿದಾಗ ಬಿದ್ದಿದ್ದಾಳೆ. ಈ ಹೊತ್ತಲ್ಲಿ ಆಕೆಯ ಅಮ್ಮ ಅಡುಗೆ ಮನೆಯಲ್ಲಿದ್ದರು.
ಮಗಳನ್ನು ರಕ್ಷಿಸಿದ್ದಕ್ಕೆ ದೋಹಾ ಅವರ ಕುಟುಂಬ ಜಬಾತ್‌ನ್ನು ಅಭಿನಂದಿಸಿದ್ದು, 200 ಟರ್ಕಿಶ್ ಲಿರಾ (50 ಡಾಲರ್) ಹಣವನ್ನು ಬಹುಮಾನವಾಗಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.