ADVERTISEMENT

Video | ಕಾಶ್ಮೀರದಲ್ಲಿ ಹಿಮದ ನಡುವೆ ನಿಂತು ವರದಿ ಮಾಡಿದ ಪುಟಾಣಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2024, 4:35 IST
Last Updated 8 ಫೆಬ್ರುವರಿ 2024, 4:35 IST
   

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ ಈಗ ಹಿಮದಿಂದ ಆವೃತವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಬ್ಬರು ಪುಟಾಣಿಗಳು ಈ ಹಿಮದ ನಡುವೆ ನಿಂತು ವರದಿ ಮಾಡುವ ರೀತಿಯಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಅವಳಿ ಸಹೋದರಿಯರು ಕಾಶ್ಮೀರದಲ್ಲಿನ ಸುಂದರವಾದ ಹಿಮಪಾತವನ್ನು ವೀಕ್ಷಿಸುವ ಬಗ್ಗೆ ಮಾತನಾಡುತ್ತಾ ಹಿಮದೊಂದಿಗೆ ಆಟವಾಡುವ ದೃಶ್ಯವನ್ನು ಕಾಣಬಹುದು. ಹಿಮ ನೋಡಲು ಕಾತುರದಿಂದ ಕಾಯುತ್ತಿದ್ದೆವು ಎನ್ನುವ ಪುಟಾಣಿಗಳು, ಹಿಮದ ಹೊದಿಕೆಯನ್ನು ನೋಡಿ ‘ಜನ್ನತ್’ (ಸ್ವರ್ಗ) ಎಂದು ಕರೆದಿದ್ದಾರೆ. 

ಮೂಲತಃ ಈ ವಿಡಿಯೊವನ್ನು ಶ್ರೀನಗರ ಗರ್ಲ್‌ ಎನ್ನುವವರ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದನ್ನು ಆನಂದ್‌ ಮಹೀಂದ್ರಾ ತಮ್ಮ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. 

ADVERTISEMENT

ವಿಡಿಯೊ ನೋಡಿದ ನೆಟ್ಟಿಗರು, ‘ಸೂಪರ್ ಕ್ಯೂಟ್‌’ ಎಂದು ಕಾಮೆಂಟ್‌ ಮಾಡಿದ್ದಾರೆ. ಬಳಕೆದಾರರೊಬ್ಬರು ‘ಮೋಡವು ತನ್ನ ಇಬ್ಬರು ಯಕ್ಷಿಣಿಯೊಂದಿಗೆ ಭೂಮಿಗೆ ಇಳಿದಂತೆ ಕಾಣುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.