ಬೆಂಗಳೂರು: ರಾಜಸ್ಥಾನ್ ಕೇಡರ್ನ ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ಒಂದಿಲ್ಲ ಒಂದು ಸಂಗತಿಯಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.
ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸದ್ಯ ರಾಜಸ್ಥಾನದ ಬಾರ್ಮೆರ್ದ ಜಿಲ್ಲಾಧಿಕಾರಿಯಾಗಿರುವ ಟೀನಾ ಅವರು ರಾಜಕಾರಣಿಯೊಬ್ಬರ ಜೊತೆ ನಡೆದುಕೊಂಡಿರುವ ರೀತಿ ವ್ಯಾಪಕ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಬಾರ್ಮೆರ್ದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕ ಸತೀಶ್ ಫೂನಿಯಾ ಅವರು ಆಗಮಿಸಿದ್ದರು. ಇವರನ್ನು ಸ್ವಾಗತಿಸುವ ಬರದಲ್ಲಿ ಟೀನಾ ಅವರು ತುಸು ಹೆಚ್ಚಾಗಿಯೇ ವಿನಮ್ರತೆ ತೋರಿದ್ದು ಚರ್ಚೆಗೆ ಕಾರಣವಾಗಿದೆ.
ಸತೀಶ್ ಫೂನಿಯಾ ಅವರು ಕಾರಿಂದ ಇಳಿದು ಬಂದಾಗ ಟೀನಾ ದಾಬಿ ಅವರು 7 ಸೆಕೆಂಡುಗಳಲ್ಲಿ ಒಟ್ಟು ಐದು ಬಾರಿ ನಮಸ್ತೆ ನಮಸ್ತೆ ಎಂದು ವಿನಮ್ರವಾಗಿ ನಡೆದುಕೊಂಡಿದ್ದಾರೆ. ಈ ಕುರಿತ ವಿಡಿಯೊವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹಿಂದೊಮ್ಮೆ ಟೀನಾ ಅವರು ರಾಜಕಾರಣಿಗಳ ಜೊತೆ ಐಎಎಸ್ ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು.
2015ರ ಐಎಎಸ್ ಬ್ಯಾಚ್ನ ಟಾಪರ್ಗಳಾಗಿದ್ದ ಟೀನಾ ಡಾಬಿ ಮತ್ತು ಅಮೀರ್ ಖಾನ್, 2018ರಲ್ಲಿ ಪ್ರೇಮ ವಿವಾಹವಾಗಿದ್ದರು. ನಂತರ 2021ರ ಆಗಸ್ಟ್ನಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.