ಭೋಪಾಲ್: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಹದಿಹರೆಯದ ಹುಡುಗಿಯೊಬ್ಬಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ವೈದ್ಯರಿಂದ ತಪ್ಪಿಸಿಕೊಳ್ಳಲು ಮರ ಹತ್ತಿರುವ ಘಟನೆ ನಡೆದಿದೆ.
ಸದ್ಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮರವೇರಿ ಕುಳಿತಿರುವ 18 ವರ್ಷದ ಹುಡುಗಿಯನ್ನು ಆರೋಗ್ಯ ಸಿಬ್ಬಂದಿ ಮನವೊಲಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಆಗಿದ್ದೇನು?
ಛತ್ತರ್‌ಪುರ ಜಿಲ್ಲೆಯ ಮಂಕಾರಿ ಗ್ರಾಮಕ್ಕೆ ಕೋವಿಡ್ ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಹುಡುಗಿ ವೈದ್ಯರನ್ನು ನೋಡಿದ ಕೂಡಲೇ ಮನೆಯಿಂದ ಓಡಿಹೋಗಿ ಮರವೇರಿ ಕುಳಿತಿದ್ದಳು. ಆದರೆ, ಅಷ್ಟಕ್ಕೆ ಸುಮ್ಮನಾಗದ ವೈದ್ಯರು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ವೈದ್ಯರು ಎಷ್ಟೇ ಮನವೊಲಿಸಿದರೂ ಯುವತಿ ಮರದಿಂದ ಕೆಳಗಿಳಿಯಲಿಲ್ಲ. ಬಳಿಕ ಪೋಷಕರು ಹಾಗೂ ಗ್ರಾಮಸ್ಥರು ಲಸಿಕೆ ಕುರಿತು ತಿಳಿ ಹೇಳಿದ ಬಳಿಕ ಹುಡುಗಿ ಮರದಿಂದ ಕೆಳಗಿಳಿದು ಲಸಿಕೆ ಪಡೆದಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.