ನವದೆಹಲಿ: ಇಂಟರ್ನೆಟ್‌ನಲ್ಲಿ ವಿವಿಧ ಬಗೆಯ ಫ್ಯೂಶನ್ ಫುಡ್‌ಗಳ ವಿಡಿಯೊಗಳನ್ನು ನೋಡಿರಬಹುದು. ಆದರೆ, ಇದೀಗ ಮಸಾಲೆ ದೋಸೆಯನ್ನು ಐಸ್‌ಕ್ರೀಂನೊಂದಿಗೆ ಬೆರೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ದಿ ಗ್ರೇಟ್ ಇಂಡಿಯನ್ ಫೂಡಿ’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ.
ಅನೇಕರು ಊಟ ಮಾಡಿದ ಬಳಿಕ ರುಚಿಕರವಾದ ಐಸ್‌ಕ್ರೀಂ ಅನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಐಸ್‌ಕ್ರೀಂ ಅನ್ನು ಮಸಾಲೆ ದೋಸೆಯೊಂದಿಗೆ ಸೇರಿಸಿ ಮಿಶ್ರಣ ಮಾಡಿ ರೋಲ್ ಮಾಡಿದ್ದಾರೆ. ಸದ್ಯ ವೈರಲ್ ಆಗಿರುವ ಈ ವಿಡಿಯೊವನ್ನು 18 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಮೊದಲಿಗೆ ಮಸಾಲೆ ದೋಸೆಯನ್ನು ಟೇಬಲ್ ಮೇಲೆ ಚೂರು ಚೂರಾಗಿ ಬೇರ್ಪಡಿಸಲಾಗುತ್ತದೆ. ಬಳಿಕ ಐಸ್‌ಕ್ರೀಂ ಅನ್ನು ಅದರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ. ಆ ಮಿಶ್ರಣ ಹದಕ್ಕೆ ಬಂದ ಬಳಿಕ ರೋಲ್‌ಗಳನ್ನಾಗಿ ಮಾಡಿ ಆಲೂಗಡ್ಡೆ ಪಲ್ಯ ಮತ್ತು ಚಟ್ನಿಯೊಂದಿಗೆ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಈ ವಿಡಿಯೊ ವೀಕ್ಷಿಸಿರುವ ದೋಸೆ ಪ್ರಿಯರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
‘ದೆಹಲಿಯ ಈ ತಿಕ್ಕಲು ವ್ಯಕ್ತಿ ದಕ್ಷಿಣ ಭಾರತದ ಒಳ್ಳೆಯ ಆಹಾರವನ್ನು ನೋಡಲು ಸಹ ಕೆಟ್ಟದಾಗಿರುವಂತೆ ಮಾಡಿದ್ದಾನೆ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ರೋಟಿ, ಸಬ್ಜಿ, ರಾಜ್ಮಾ ಚಾವಲ್, ಚೋಲೆ ಭಟೂರೆ ಜೊತೆ ಐಸ್‌ಕ್ರೀಂ ತಿನ್ನಲು ಕಾಯುತ್ತಿದ್ದೇನೆ’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.