ಲಾಹೋರ್: ಪಾಕಿಸ್ತಾನದಲ್ಲಿ ಪ್ರವಾಹದ ವೇಳೆ ನೀರಿನಲ್ಲಿ ನಿಂತು ವರದಿ ಮಾಡುತ್ತಿರುವ ಪತ್ರಕರ್ತರೊಬ್ಬರ ವಿಡಿಯೊ ವೈರಲ್ ಆಗಿದೆ.
ಪಾಕಿಸ್ತಾನದ ಕೋಟ್ ಚಟ್ಟಾ ಪ್ರದೇಶದಲ್ಲಿ ಜಿಟಿವಿ ವಾಹಿನಿಯ ಪತ್ರಕರ್ತ ಅಜದಾರ್ ಹುಸೇನ್ ಎಂಬವರು ಕುತ್ತಿಗೆವರೆಗೆ ನೀರಿದ್ದರೂ ಪ್ರವಾಹದ ತೀವ್ರತೆ ಬಗ್ಗೆ ವರದಿ ಮಾಡುತ್ತಿರುವ ವಿಡಿಯೊ ಇದಾಗಿದೆ.
ಯುರೋ ನ್ಯೂಸ್ ಪ್ರಕಾರ ಆರು ದಿನಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಸ್ಥಳೀಯರ ಸಂಕಷ್ಟಗಳ ಬಗ್ಗೆ ವಿವರಿಸಲು ಪತ್ರಕರ್ತ ಪ್ರವಾಹದ ಮಧ್ಯೆ ನಿಂತು ವರದಿ ಮಾಡಿದ್ದಾರೆ. ಜುಲೈ 25ರಂದು ಜಿಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊ ಶೇರ್ ಆಗಿದೆ.
ಪ್ರವಾಹದ ನೀರಿನಲ್ಲಿ ನಿಂತುತಲೆ ಮಾತ್ರ ಹೊರ ಹಾಕಿ ಮೈಕ್ರೊಫೋನ್ ಹಿಡಿದು ವರದಿ ಮಾಡುತ್ತಿರುವ ಈ ಪ್ರತಕರ್ತ ಸಿಂಧೂನದಿಯಲ್ಲಿನ ಪ್ರವಾಹ ಕೃಷಿಭೂಮಿಯನವ್ನು ಹೇಗೆ ಮುಳುಗಿಸಿದೆ ಎಂದು ವಿವರಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿರುವ ಈ ವಿಡಿಯೊ ಬಗ್ಗೆ ಪ್ರತಿಕ್ರಯಿಸಿದ ಕೆಲವು ನೆಟ್ಟಿಗರು ವರದಿಗಾರನ ಧೈರ್ಯವನ್ನು ಶ್ಲಾಘಿಸಿದರೆ ಇನ್ನು ಕೆಲವರು ಪತ್ರಕರ್ತನನ್ನು ಅಪಾಯದಂಚಿನಲ್ಲಿರಿಸಿ ಸುದ್ದಿ ನೀಡಿದ ವಾಹಿನಿ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.