ADVERTISEMENT

ಸರ್ಕಾರಿ ಹೈಸ್ಕೂಲ್‌ನಲ್ಲಿ ಬಿಯರ್ ಕುಡಿದು ಪಾರ್ಟಿ ಮಾಡಿದ ವಿದ್ಯಾರ್ಥಿನಿಯರು!

ಮಸ್ತೂರಿ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ ಜುಲೈ 29ರಂದು ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದರು.

ಪಿಟಿಐ
Published 10 ಸೆಪ್ಟೆಂಬರ್ 2024, 11:35 IST
Last Updated 10 ಸೆಪ್ಟೆಂಬರ್ 2024, 11:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಿಲಾಸಪುರ (ಛತ್ತೀಸಗಢ): ಛತ್ತೀಸಗಢದ ಬಿಲಾಸಪುರ ಜಿಲ್ಲೆಯ ಸರ್ಕಾರಿ ಶಾಲೆಯ ಒಳಗೆ ಕೆಲವು ವಿದ್ಯಾರ್ಥಿನಿಯರು ಬಿಯರ್‌ ಕುಡಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಶಿಕ್ಷಣಾಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಮಸ್ತೂರಿ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ ಜುಲೈ 29ರಂದು ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಬಾಲಕಿಯರು ಬಿಯರ್ ಮತ್ತು ನೀರು ಕುಡಿಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ’ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಟಿ.ಆರ್‌.ಸಾಹು ಹೇಳಿದರು.

‘ತನಿಖೆಗೆ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಸಂಬಂಧಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳನ್ನು ಪಡೆಯಲಾಗಿದೆ. ‘ತಮಾಷೆಗಾಗಿ ಬಿಯರ್‌ ಬಾಟಲಿಗಳನ್ನು ಹಿಡಿದುಕೊಂಡಿದ್ದೆವು. ಬಿಯರ್ ಕುಡಿಯಲಿಲ್ಲ’ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.

‘ಮತ್ತೊಮ್ಮೆ ಇಂಥ ಘಟನೆಗಳು ನಡೆಯದಂತೆ ಶಾಲೆಯ ಪ್ರಾಂಶುಪಾಲರು ಮತ್ತು ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಜೊತೆಗೆ ಬಾಲಕಿಯ ಪೋಷಕರಿಗೂ ನೋಟಿಸ್‌ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಅಧಿಕೃತ ಮಾಹಿತಿ ಪ್ರಕಾರ, ಕೆಲ ಬಾಲಕಿಯರು ಜುಲೈ 29ರಂದು ತಮ್ಮ ಸಹಪಾಠಿಯ ಜನ್ಮದಿನವನ್ನು ತರಗತಿಯ ಒಳಗೆ ಆಚರಿಸಿದ್ದರು. ಈ ಸಂದರ್ಭದಲ್ಲಿ ಬಿಯರ್‌ ಕುಡಿದಿದ್ದರು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಾಲಕಿಯೊಬ್ಬಳು ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.