ಬೆಂಗಳೂರು: ಜಗತ್ತಿನ ಅತ್ಯಂತ ದುಬಾರಿ ಟೀ ಮಗ್ ಬಗ್ಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಮಾಹಿತಿ ಹಂಚಿಕೊಂಡಿದೆ.
Guinness World Records ತನ್ನ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಅದು ಹೇಳಿರುವ ಪ್ರಕಾರ ಈ ಟೀ ಮಗ್‌ನ ಬೆಲೆ ಬರೋಬ್ಬರಿ ₹24 ಕೋಟಿ (3,000,000 ಡಾಲರ್).
ಇದು ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ಟೀ ಮಗ್ ಎಂದು ಹೇಳಿದೆ.
ಈ ಟೀ ಮಗ್ ನ ಒಳ ಮೈಯನ್ನು ಹಾಗೂ ನಳಿಕೆಯನ್ನು 18 ಕ್ಯಾರೆಟ್‌ನ ಚಿನ್ನದಿಂದ ತಯಾರಿಸಲಾಗಿದೆ. ಹೊರ ಮೈಯನ್ನು ಸಂಪೂರ್ಣವಾಗಿ ವಜ್ರದ ಹರಳುಗಳಿಂದ ರೂಪಿಸಲಾಗಿದ್ದು ಮಧ್ಯದಲ್ಲಿ ಅತ್ಯಂತ ಆಕರ್ಷಕವಾಗಿ 6.67 ಕ್ಯಾರೆಟ್ ರೂಬಿ ವಜ್ರದಿಂದ ಹೊಳಪು ನೀಡಲಾಗಿದೆ.
ಮಗ್‌ನ ಹಿಡಿಕೆಯನ್ನು ಆನೆಯೊಂದರ ಪಳಿಯುಳಿಕೆ ದಂತದಿಂದ ಮಾಡಲಾಗಿದೆ ಎಂದು ಗಿನ್ನಿಸ್ ಸಂಸ್ಥೆ ತಿಳಿಸಿದೆ. ಈ ಬೆಲೆಬಾಳುವ ವಸ್ತುವಿನ ಒಡೆತನವನ್ನು ಭಾರತೀಯ ಮೂಲದವರು ಸ್ಥಾಪಿಸಿರುವ ಲಂಡನ್‌ನ ಎನ್ ಸೇಥಿಯಾ ಫೌಂಡೇಶನ್ (N Sethia Foundation) ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.