ಬೆಂಗಳೂರು: ಮಿಜೋರಾಂನಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ ಜಿಯೋನಾ ಚನಾ ಭಾನುವಾರ ಸಾವನ್ನಪ್ಪಿದ್ದಾರೆ.
ಜಿಯೋನಾ ಚನಾ (76) ವಿಶೇಷತೆಯೇನೆಂದರೆ, ಅವರು 38 ಪತ್ನಿಯರನ್ನು ಹೊಂದಿದ್ದು, 89 ಮಕ್ಕಳನ್ನು ಪಡೆದಿದ್ದರು. ಅಲ್ಲದೆ, 33 ಮೊಮ್ಮಕ್ಕಳು ಕೂಡ ಜಿಯೋನಾಗಿದ್ದರು.
ಜಿಯೋನಾ ಕುಟುಂಬದಲ್ಲಿ ಒಟ್ಟು 161 ಮಂದಿ ವಾಸವಾಗಿದ್ದರು. ನಾಲ್ಕು ಅಂತಸ್ತಿನ ಮನೆಯಲ್ಲಿ ಜಿಯೋನಾ ಕುಟುಂಬ ವಾಸವಿದ್ದು, ಇವರ ಕುಟುಂಬ ವಿಶ್ವಪ್ರಸಿದ್ಧಿ ಪಡೆದಿತ್ತು.
ಮಿಜೋರಾಂನ ಬಕ್ತಾಂಗ್‌ನ ತ್ಲಾಂಗ್ನಂನಲ್ಲಿದ್ದ ಜಿಯೋನಾ ಕುಟುಂಬವನ್ನು ವೀಕ್ಷಿಸಲೆಂದೇ ಹಲವಾರು ಪ್ರವಾಸಿಗರು ಹಳ್ಳಿಗೆ ಭೇಟಿ ನೀಡುತ್ತಿದ್ದರು.
ಜಿಯೋನಾ ಅವರ ಪಂಥದಲ್ಲಿರುವ ಬಹುಪತ್ನಿತ್ವ ಅನುಸಾರ ಅವರು 38 ಮದುವೆಯಾಗಿದ್ದರು. ಜಿಯೋನಾ ಜಗತ್ತಿನ ಅತಿದೊಡ್ಡ ಕುಟುಂಬದ ಯಜಮಾನನಾಗಿದ್ದರು.
ಜಿಯೋನಾ ಸಾವಿಗೆ ಮಿಜೋರಾಂ ಸಿಎಂ ಝೋರಂತಂಗಾ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ. ಜಿಯೋನಾ ವಯೋಸಹಜ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.