ADVERTISEMENT

ಫ್ಯಾಷನ್‌ ನೋಟಕ್ಕೆ ಆ್ಯಂಕಲ್ ಬೂಟ್‌‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 19:30 IST
Last Updated 12 ಜೂನ್ 2020, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಫ್ಯಾಷನ್ ಪ್ರಿಯರಿಗೆ ಕೇವಲ ಡ್ರೆಸ್ ಅಷ್ಟೇ ಪ್ರಿಯವಲ್ಲ. ಡ್ರೆಸ್‌ಗೆ ಹೊಂದುವ ಮ್ಯಾಚಿಂಗ್ ಬ್ಯಾಗ್‌, ಚಪ್ಪಲಿಗಳು ಅಷ್ಟೇ ಪ್ರಿಯ. ಕಾಲ ಕಾಲಕ್ಕೆ ಬದಲಾಗುವ ಫ್ಯಾಷನ್‌ ಟ್ರೆಂಡ್‌ಗೆ ಹೊಸದಾಗಿ ಸೇರ್ಪಡೆಯಾಗಿದೆ ಆ್ಯಂಕಲ್ ಬೂಟ್ಸ್‌. ಇದನ್ನು ಧರಿಸುವುದರಿಂದ ಸ್ಟೈಲಿಷ್ ಆಗಿ ಕಾಣಬಹುದು. ಪಾರ್ಟಿ, ಔಟಿಂಗ್‌ಗೆ ಹೊಂದುವ ಈ ಆ್ಯಂಕಲ್ ಬೂಟ್‌ಗಳು ಧರಿಸಿದ ಡ್ರೆಸ್‌ಗೆ ಟ್ರೆಂಡಿ ನೋಟ ಸಿಗುವಂತೆ ಮಾಡುತ್ತದೆ. ಉದ್ದನೆಯ, ಹಿಮ್ಮಡಿಯನ್ನು ಪೂರ್ತಿಯಾಗಿ ಮುಚ್ಚುವ ಆ್ಯಂಕಲ್ ಬೂಟ್‌ಗಳು ಕಾಲಿನ ಅಂದವನ್ನು ಹೆಚ್ಚಿಸುತ್ತದೆ. ವಿಭಿನ್ನ ವಿನ್ಯಾಸದ ಬಣ್ಣ ಬಣ್ಣ ಬೂಟ್‌ಗಳುಫ್ಯಾಷನ್‌ ಲಲನೆಯರ ಅಂದ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಆ್ಯಂಕಲ್‌ ಬೂಟ್‌ಗಳು‌ ಇಂದಿನ ಲಲನೆಯರು ವಾರ್ಡ್‌ರೋಬ್‌ನ ಅಗತ್ಯಗಳಲ್ಲಿ ಒಂದು. ಎಲ್ಲಾ ರೀತಿಯ ಪಾಶ್ಚಾತ್ಯ ಡ್ರೆಸ್‌ಗಳೊಂದಿಗೆ ಹೊಂದಿಕೆಯಾಗುವ ಈ ಬೂಟ್‌ಗಳು ಜೀನ್ಸ್‌, ಮಿನಿ ಸ್ಕರ್ಟ್‌ ಜೊತೆ ಧರಿಸಲು ಹೆಚ್ಚು ಸೂಕ್ತ. ನಿಮಗೆ ಒಂದು ವಿಭಿನ್ನ ಫ್ಯಾಷನ್ ನೋಟ ಬೇಕೆಂದರೆ ಬೇರೆ ರೀತಿಯ ಡ್ರೆಸ್‌ಗಳೊಂದಿಗೂ ಇದನ್ನು ಜೋಡಿ ಮಾಡಿಕೊಳ್ಳಬಹುದು. ಈ ಬೂಟ್‌ಗಳು ಎಲ್ಲಾ ಕಾಲಕ್ಕೂ ಸೈ ಎನ್ನಿಸಿಕೊಂಡರೂ ಚಳಿಗಾಲದಲ್ಲಿ ಹೆಚ್ಚು ಹೊಂದಿಕೆಯಾಗುತ್ತವೆ.

ಆ್ಯಂಕಲ್‌ ಬೂಟ್‌ಗೆ ಹೆಚ್ಚು ಹೊಂದಿಕೆಯಾಗುವ ಡ್ರೆಸ್‌ಗಳು ಯಾವುವು ಹಾಗೂ ಅವುಗಳನ್ನು ಧರಿಸುವ ಬಗೆ ಹೇಗೆ ಎಂದು ತಿಳಿಯೋಣ ಬನ್ನಿ.

ADVERTISEMENT

ಜೀನ್ಸ್‌ನೊಂದಿಗೆ ಆ್ಯಂಕಲ್‌ ಬೂಟ್‌
ಜೀನ್ಸ್‌ನೊಂದಿಗೆ ಆ್ಯಂಕಲ್‌ ಬೂಟ್ ಹೆಚ್ಚು ಹೊಂದುತ್ತದೆ. ಇದು ಧರಿಸಲು ಸುಲಭ ಹಾಗೂ ಆರಾಮದಾಯಕ. ಜೀನ್ಸ್ ಹಾಗೂ ಆ್ಯಂಕಲ್ ಬೂಟ್ ಜೋಡಿ ಸಾಂಪ್ರದಾಯಿಕ ನಿಮಗೆ ವಿಭಿನ್ನ ನೋಟ ಸಿಗುವಂತೆ ಮಾಡುತ್ತದೆ. ನೀಲಿ ಬಣ್ಣ ಆ್ಯಂಕಲ್ ಜೀನ್ಸ್‌ನೊಂದಿಗೆ ಕಪ್ಪು ಆ್ಯಂಕಲ್ ಬೂಟ್‌ ಧರಿಸುವುದರಿಂದ ಸ್ಟೈಲಿಷ್‌ ಆಗಿ ಕಾಣಬಹುದು.ಟೈಟ್‌ ಫಿಟ್‌ ಜೀನ್ಸ್‌ನೊಂದಿಗೆ ಆ್ಯಂಕಲ್ ಬೂಟ್ ಹೆಚ್ಚು ಹೊಂದಿಕೆಯಾಗುತ್ತದೆ. ಇದನ್ನು ಜೀನ್ಸ್ ಟಾಪ್ ಹಾಗೂ ಬ್ಲೇಸರ್ ಜೊತೆ ಧರಿಸಿದರೆ ಒಂದು ಕ್ಲಾಸಿ ನೋಟ ಸಿಗುತ್ತದೆ. ನಿಮ್ಮ ಜೀನ್ಸ್‌ನ‌ ಉದ್ದ ಹೆಚ್ಚಿದ್ದರೆ ಅದನ್ನು ಸ್ವಲ್ಪ ಮಡಿಸಿ ಅದರೊಂದಿಗೆ ಆ್ಯಂಕಲ್ ಬೂಟ್ ಧರಿಸಬಹುದು.

ಕುಲೋಟ್ಸ್‌ನೊಂದಿಗೆ..
ಪಾಲಾಜೊದಂತೆ ಕಾಣುವ ಕುಲೋಟ್ಸ್ ಇಂದಿನ ಫ್ಯಾಷನ್‌ ಪ್ರಿಯರ ನೆಚ್ಚಿನ ದಿರಿಸು. ಮೊಣಕಾಲಿನಿಂದ ಕೊಂಚ ಉದ್ದಕ್ಕೆ ಇರುವ ಈ ಪ್ಯಾಂಟ್ ತುಂಬಾ ಆರಾಮದಾಯಕ ಉಡುಪು. ಕ್ರಾಪ್ ಟಾಪ್‌, ತುಂಬು ತೋಳಿನ ಟಾಪ್‌ಗೆ ಇದರೊಂದಿಗೆ ಹೊಂದುತ್ತದೆ. ಕುಲೋಟ್ಸ್‌ನೊಂದಿಗೆ ಆ್ಯಂಕಲ್‌ ಬೂಟ್‌ ಅನ್ನು ಜೋಡಿ ಜೊತೆಯಾಗಿ ಧರಿಸಿದರೆ ನಿಮಗೊಂದು ಗ್ರ್ಯಾಂಡ್ ನೋಟ ಸಿಗುತ್ತದೆ. ಜೊತೆಗೆ ಕುಳ್ಳಗಿರುವವರು ಇದನ್ನು ಧರಿಸಿದರೆ ಉದ್ದವಾಗಿ ಕಾಣಬಹುದು. ಯಾವುದೇ ಬಣ್ಣದ ಕುಲೋಟ್ಸ್‌ನೊಂದಿಗೆ ಬಿಳಿ ಬಣ್ಣದ ಟಾಪ್‌ ಧರಿಸಿ ನೀಲಿ ಬಣ್ಣದ ಆ್ಯಂಕಲ್ ಬೂಟ್ಸ್ ಧರಿಸಿದರೆ ಅದು ಟ್ರೆಂಡಿ ನೋಟ ಬೀರುವುದರಲ್ಲಿ ಸಂಶಯವಿಲ್ಲ. ಜೊತೆಗೆ ಲೆದರ್‌ ಜಾಕೆಟ್‌ನೊಂದಿಗೂ ಆ್ಯಂಕಲ್ ಬೂಟ್‌ ಅನ್ನು ಧರಿಸಬಹುದು.

ಸ್ಕರ್ಟ್‌ನೊಂದಿಗೆ..‌
ಸ್ಕರ್ಟ್‌ ಟಾಪ್‌ನೊಂದಿಗೆ ಆ್ಯಂಕಲ್ ಬೂಟ್ ಧರಿಸಿದರೆ‌ ಆ ಡ್ರೆಸ್‌ನ ಅಂದ ಹೆಚ್ಚುತ್ತದೆ. ಸಂಜೆಯ ಪಾರ್ಟಿ ಅಥವಾ ಡೇಟಿಂಗ್, ಔಟಿಂಗ್‌ ಹೋಗಲು ಇದು ಸೂಕ್ತ. ಮೊಣಕಾಲುದ್ದದ ಟಾಪ್‌ ಅಥವಾ ಮಿನಿ ಸ್ಕರ್ಟ್ ಜೊತೆ ಆ್ಯಂಕಲ್ ಬೂಟ್ ಧರಿಸಲು ಸೂಕ್ತ. ಇದರೊಂದಿಗೆ ಕೂದಲು ಇಳಿ ಬಿಟ್ಟುಕೊಂಡು ಕಿವಿಗೆ ಸ್ಟಡ್‌ ಧರಿಸಿದರೆ ನಿಮಗೆ ಕ್ಲಾಸಿ ನೋಟ ಸಿಗುವುದರಲ್ಲಿ ಸಂಶಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.