ADVERTISEMENT

ಅಚಲ ವಿಶ್ವಾಸದ ಅನಿತಾ

ಅಂಜಲಿ ರಾಮಣ್ಣ
Published 23 ಆಗಸ್ಟ್ 2024, 23:44 IST
Last Updated 23 ಆಗಸ್ಟ್ 2024, 23:44 IST
<div class="paragraphs"><p>ಅನಿತಾ ರಾಠಿ</p></div>

ಅನಿತಾ ರಾಠಿ

   

ಮದುವೆಯಾದ ಕೂಡಲೇ ಜೀವನ ಸತ್ವವೇ ಅರ್ಧವಾಗಿ ಹೋಗುತ್ತದೆ ಎಂದು ನಂಬಿಕೊಂಡಿರುವ ಮತ್ತು ಹಾಗೆಯೇ ವರ್ತಿಸುವ ಸ್ನೇಹಿತೆಯರು ನಮ್ಮ ನಡುವೆಯೇ ಓಡಾಡುತ್ತಿರುತ್ತಾರೆ.  ಒಂದು ಮಗುವಾಗಿ ಬಿಟ್ಟರಂತೂ ಮುಗಿದೇ ಹೋಯಿತು.  ಸ್ವಬದುಕಿನೆಡೆಗೆ ಎಲ್ಲಾ ನಿಜಾರ್ಥದ ಆಸಕ್ತಿಯನ್ನು ಕಳೆದುಕೊಂಡು ಇಲ್ಲ ಸಲ್ಲದ ಕಾರಣ ಕೊಟ್ಟು ಮೈಯನ್ನು ಯದ್ವಾತದ್ವ ಬೆಳೆಸಿಕೊಂಡು ಮನಮುಟ್ಟದ appearance, approach ಮತ್ತು acceptance ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ.

ಇಂತಹ ಮಹಿಳೆಯರನ್ನು ಹೊಡೆದೆಬ್ಬಿಸಿ ಜೀವಜಲವನ್ನು ಸಿಂಪಡಿಸುವಂತೆ ಇದ್ದಾರೆ ಅನಿತಾ ರಾಠಿ.  42 ವರ್ಷ ವಯಸ್ಸಿನ ಅನಿತಾಗೆ ಮದುವೆಯಾಗಿ 22 ವರ್ಷಗಳು. ಮೂರು ಮಕ್ಕಳ ತಾಯಿ. ತೂಕ ಹೆಚ್ಚಾಗಿ ಆರೋಗ್ಯ ದೂರವಾಗಲು ಆರಂಭವಾದಾಗ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಅನಿತಾ ಜಿಮ್‍ಗೆ ಸೇರಿಕೊಳ್ಳುತ್ತಾರೆ. ಬೆಳಗಿನ ಜಾವ 4 ಗಂಟೆಗೆ ಎದ್ದು ಸಂಸಾರದ ಜವಾಬ್ದಾರಿ ನಿರ್ವಹಿಸಿ 3 ಗಂಟೆಗಳ ಕಾಲ ತಮ್ಮ ದೇಹದ ಮೆಲೆ ವ್ಯಯಿಸುವ ಅನಿತಾ ಭಾರ ಎತ್ತುವುದರಲ್ಲಿ ಗಟ್ಟಿಗಿತ್ತಿ ಎನ್ನುವುದನ್ನು ಮನಗೊಂಡ ಆಕೆಯ ಜಿಮ್ ತರಬೇತುದಾರರು ಹೆಚ್ಚಿನ ಗಮನಕೊಟ್ಟು ಆಕೆಯನ್ನು ಭಾರ ಎತ್ತುವ ಸ್ಪರ್ಧೆಗೆ ಸಿದ್ಧಳಾಗುವಂತೆ ತಯಾರು ಮಾಡುತ್ತಾರೆ.

ADVERTISEMENT

ತನಗೆ ತಾನೇ ಸಖ ಎನ್ನುವುದನ್ನು ಬಲವಾಗಿ ನಂಬಿಕೊಂಡ ಅನಿತಾ ರಾಜಸ್ಥಾನದ ಕೋಟಾದಲ್ಲಿ ನಡೆದ ರಾಜ್ಯ ಮಟ್ಟದ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ  ಚಿನ್ನದ ಪದಕ ಗಳಿಸುತ್ತಾರೆ. ಔರಂಗಾಬಾದಿನಲ್ಲಿ ನಡೆದ ಸ್ಪರ್ಧೆಯಲ್ಲೂ ವಿಜಯಿ ಈಕೆ. ನಂತರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗಳಿಸುತ್ತಾರೆ. ಅನಿತಾ ಇದೇ ವರ್ಷದ ಮೇ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಬಂದಿದ್ದಾರೆ. ಇಂತಹ ಸ್ಪೂರ್ತಿ ತುಂಬುವ ಕಥೆಗಳನ್ನು ಕೇಳಿದಾಗ ’ಅವಳಿಗೇನು ಕುಟುಂಬದ ಸಪೋರ್ಟ್ ಇರತ್ತೆ. ನಮಗೆ ಹಾಗಿಲ್ಲವಲ್ಲ’ ಗೊಣಗುವವರೇ ಹೆಚ್ಚು. ಇಲ್ಲಿ ಬಂಧನವೇ ನಿಜಾರ್ಥದ ಬಿಡುಗಡೆ ಎನ್ನುವುದನ್ನು ಅರ್ಥ ಮಾಡಿಕೊಂಡು  ತನ್ನದೇ ಮನದ ಬಾವಿಯ ಹೂಳನ್ನು ತಾನೇ ಎತ್ತುವ ಮಹಿಳೆ ಎಂದೂ ನೆನಪಿನಲ್ಲಿ ಉಳಿಯಬಲ್ಲಳು. ಜೀವನ ಒಂದು hurdle race. ಅದಕ್ಕೇ ಇಷ್ಟು ಸುಂದರ ಎನ್ನುವುದನ್ನು ಮುಂದಿನವರಿಗೂ ಕಲಿಸಿಕೊಡಬಲ್ಲಳು.

ಅನಿತಾ ರಾಠಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.