ADVERTISEMENT

ಮಹಿಳಾ ಆರೋಗ್ಯ | ಹಾಲುಣಿಸಿದರೆ ಸ್ತನಕ್ಯಾನ್ಸರ್‌ ತಡೆಯಬಲ್ಲಿರಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:09 IST
Last Updated 26 ಅಕ್ಟೋಬರ್ 2024, 0:09 IST
ಸ್ತನ ಕ್ಯಾನ್ಸರ್ ಜಾಗೃತಿ ಮಾಸ (ಸಾಂದರ್ಭಿಕ ಚಿತ್ರ)
ಸ್ತನ ಕ್ಯಾನ್ಸರ್ ಜಾಗೃತಿ ಮಾಸ (ಸಾಂದರ್ಭಿಕ ಚಿತ್ರ)   

ಸ್ತನ ಕ್ಯಾನ್ಸರ್‌ಗೆ ನಮ್ಮ ಏರು ಪೇರಾದ ಜೀವನ ಶೈಲಿಯೂ ಒಂದು ಕಾರಣವೆಂದು ಇಂದಿನ ದಿನಗಳಲ್ಲಿ ಮನವರಿಕೆ ಮಾಡಿಕೊಡಬೇಕಾಗಿದೆ.

ಸ್ತನ ಕ್ಯಾನ್ಸರ್ ಮಹಿಳೆಯ ಎದೆಯ ಅಂಗಾಂಶದಿಂದ ಬೆಳೆಯುವ ಒಂದು ತರಹದ ಆರ್ಬುದ ರೋಗ. ಮೊಲೆಗಳಲ್ಲಿ ಬರೀ ಒಂದು ಉಂಡೆ ಆಕಾರದ ಚಿಕ್ಕ ಮುದ್ದೆ ಕಾಣಿಸಿಕೊಂಡೀತು. ಮಹಿಳೆಗೆ ಇದು ಗೊತ್ತಾಗಲಿಕ್ಕಿಲ್ಲ. ಆದ್ದರಿಂದಲೇ 40 ವರ್ಷ ದಾಟಿದ ಪ್ರತಿ ಮಹಿಳೆ ವಾರದಲ್ಲಿ ಒಂದು ಸಲವಾದರೂ ತನ್ನ ಸ್ತನಗಳನ್ನು ಮುಟ್ಟಿ ಪರೀಕ್ಷಿಸಿಕೊಳ್ಳಬೇಕು.  

ಸ್ತನಗಳ ಆಕಾರದಲ್ಲಿ ಏರು ಪೇರು, ಮೊಲೆ ತೊಟ್ಟುಗಳಲ್ಲಿ ದ್ರವ ವಸರಿದಂತೆನಿಸಬಹುದು.  ಸ್ತನಗಳ ಗಾತ್ರ ಕಡಿಮೆಯಾಗುವುದು, ಕುಗ್ಗುವುದು ಆದಲ್ಲಿ ಮಹಿಳೆ  ವೈದ್ಯರ ಮೋರೆ ಹೋಗಬಹುದು. ಹಲವರಲ್ಲಿ ಕ್ಯಾನ್ಸರ್‌ ದೇಹದ ಇತರ ಭಾಗಗಳಿಗೂ ಹಬ್ಬಿ, ವಿಪರೀತ ಮೂಳೆ ನೋವು, ಉಬ್ಬಿಕೊಂಡ ದುಗ್ದರಸ ಗ್ರಂಥಿಗಳು, ಉಸಿರಾಟದಲ್ಲಿ ತೊಂದರೆ ಹಾಗೂ ಹಳದಿ ಚರ್ಮ ಕಾಣಿಸಿಕೊಳ್ಳಬಹುದು.

ADVERTISEMENT

ದೇಹದ ಇತರ ಅಂಗಾಂಗಳಿಗೆ ಕ್ಯಾನ್ಸರ್ ಹರಡಿದ್ದರೆ ಕಾಯಿಲೆ ಸಾಕಷ್ಟು ಉಲ್ಬಣಗೊಂಡಿದೆ ಎಂದೇ ತೀರ್ಮಾನ. ಶೇಕಡಾ 80 ಸ್ತನ ಕ್ಯಾನ್ಸರ್‌ಗಳು ಸ್ತನದಲ್ಲಿ ಚಿಕ್ಕ ಮುದ್ದೆ ಕಾಣಿಸಿಕೊಂಡಾಗ ವೈದ್ಯರು ರೋಗ ನಿದಾನ ಮಾಡುತ್ತಾರೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಇದ್ದಾಗ ಮೆಮೋಗ್ರಾಮ ಎಂಬ  ಪರೀಕ್ಷೆ ಮಾಡಿ ಕಂಡು ಹಿಡಿಯಬಹುದು.  

ಸ್ತನ ಕ್ಯಾನ್ಸರ್‌ದ ಇತರ ಲಕ್ಷಣಗಳೆಂದರೆ

  • ಮಹಿಳೆಯ ಚರ್ಮ ಸುಕ್ಕು ಬೀಳುವುದು

  • ಮೊಲೆ ತೊಟ್ಟಿನ ಸುತ್ತ ಕಾಣಿಸಿಕೊಳ್ಳುವ ಗುಳ್ಳೆಗಳು,

  • ತೊಟ್ಟಿನ ಮುಖಾಂತರ ದ್ರವ ಹೊರ ಸೂಸುವುದು

  • ದಪ್ಪವಾದ ಚರ್ಮ,

  • ಇನ್ನೊಂದು ಸ್ತನಕ್ಕಿಂತ ಒಂದು ಸ್ತನ ಗಾತ್ರದಲ್ಲಿ ಉಬ್ಬುವುದು

  • ತೊಟ್ಟುಗಳ ಸ್ಥಾನ ಪಲ್ಲಟ

  • ತಲೆ ಕೆಳಗಾದ ತೊಟ್ಟುಗಳು

  • ಸ್ತನ ಅಥವಾ ಸುತ್ತಲಿನ ಭಾಗದಲ್ಲಿ ವಿಪರೀತ ನಿರಂತರ ನೋವು

ಸ್ತನ ಕ್ಯಾನ್ಸರಿಗೆ ಏನು ಕಾರಣ? – ಹಲವು ಅಪಾಯಕಾರಿ ಹಾಗೂ ತಡೆಗಟ್ಟಬಲ್ಲ ಕಾರಣಗಳೆಂದರೆ

  • ವಿಪರೀತ ಬೊಜ್ಜು ಶೇಖರಣೆ

  • ದೈಹಿಕ ವ್ಯಾಯಾಮ ಮಾಡದೇ ಇರುವುದು, ದೇಹ ದಂಡನೆಯ ಕೊರತೆ

  • ವಿಪರೀತ ಮದ್ಯ ಸೇವನೆ

  • ಋತು ಬಂಧದ ಆಸು ಪಾಸಿನಲ್ಲಿ ಹಾರ್ಮೋನು ಬದಲಿ ಚಿಕಿತ್ಸೆ.

  • ಅತೀ ವೇಗದಲ್ಲಿ ಮೊದಲ ಮುಟ್ಟಿನ ಆರಂಭ

  • ಮಕ್ಕಳನ್ನು ಪಡೆಯುವದರಲ್ಲಿ ವಿಳಂಬ

  • ಮಕ್ಕಳು ಆಗದೇ ಇರುವುದು

  • ವೃದ್ಧಾಪ್ಯ

  • ಕುಟುಂಬದಲ್ಲಿ ಇನ್ನೊಬ್ಬರಿಗೂ ಯಾರಿಗಾದರೂ ಸ್ತನದ ಕ್ಯಾನ್ಸರ್ ಆಗಿದ್ದ ಇತಿಹಾಸ.

  • ವಂಶವಾಹಿನಿಗಳ ಮುಖಾಂತರ ಹರಡುವ ಸ್ತನ ಕ್ಯಾನ್ಸರ್.

  • ರೋಗ ನಿದಾನವನ್ನು ಅತ್ಯಂತ ತ್ವರಿತವಾಗಿ ಹಾಗೂ ಖಚಿತವಾಗಿ ಮಾಡಬಲ್ಲ ಒಂದೇ ಒಂದು ಪರೀಕ್ಷೆ ಅಂದರೆ "ಬಯಾಪ್ಸಿ".

ಸ್ತನ ಕ್ಯಾನ್ಸರ್‌ ತಡೆಯುವ ಬಗೆ

  • ಸ್ತನದ ಕ್ಯಾನ್ಸರ್‌ನ್ನು ಮಹಿಳೆಯರು ಕೆಲವು ಜೀವನ ಶೈಲಿಯ ಮಾರ್ಪಾಟಿನಿಂದ ತಡೆಗಟ್ಟಬಲ್ಲರು. ಉದಾ: ಬೊಜ್ಜು ಆಗದಂತೆ ನೋಡಿಕೊಳ್ಳುವುದು,

  • ಪ್ರತಿ ನಿತ್ಯ ಕನಿಷ್ಟ ಒಂದು ಗಂಟೆಯ ರಭಸವಾದ ಶಾರೀರಿಕ ವ್ಯಾಯಾಮ, ಮತ್ತು ಇನ್ನೊಂದು ಅತ್ಯಂತ ಪ್ರಮುಖವಾದ ಜೀವನ ಶೈಲಿ ಅಂದರೆ ಮಹಿಳೆಯ ತನ್ನ ಮಕ್ಕಳಿಗೆ ಧೀರ್ಘಾವಧಿವರೆಗೆ ಎದೆಯ ಹಾಲುಣಿವುದು. 

  • ತಂಬಾಕು ಸೇವನೆ, ಧೂಮ್ರಪಾನ, ಮದ್ಯದ ಮೇಲೆ ವಿಪರೀತ ಅವಲಂಬನೆ - ಇವೆಲ್ಲವುಗಳನ್ನು ತ್ಯಜಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.