ಬೆಂಗಳೂರು: ಹರಿಯಾಣದ ಗುರುಗ್ರಾಮದಲ್ಲಿ ಮಾರುಕಟ್ಟೆ ಪ್ರದೇಶದಿಂದ ಮನೆಗೆ ತೆರಳುವ ವೇಳೆ ಅಟೋರಿಕ್ಷಾದಲ್ಲಿ ತಮ್ಮನ್ನು ಅಪಹರಿಸಲು ಯತ್ನಿಸಲಾಗಿತ್ತು ಎಂದು ಆರೋಪಿಸಿ ಯುವತಿಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿಶಿತಾ ಎಂಬವರು ಗುರುಗ್ರಾಮದ ಸೆಕ್ಟರ್ 22ರ ಜನನಿಬಿಡ ಮಾರುಕಟ್ಟೆ ಪ್ರದೇಶದಿಂದ ಅಟೋರಿಕ್ಷಾದಲ್ಲಿ ಮನೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಧ್ಯಾಹ್ನ 12:30ರ ವೇಳೆ ತಾನು ಅಟೋರಿಕ್ಷಾದಲ್ಲಿ ತೆರಳುತ್ತಿದ್ದೆ, ಮನೆ ತಲುಪಲು ಇನ್ನೇನು ಏಳು ನಿಮಿಷ ಇದೆ ಎನ್ನುವಾಗ ನಿಗದಿತ ದಾರಿಯ ಬದಲು ಅಟೋ ಚಾಲಕ ಮತ್ತೊಂದು ರಸ್ತೆಯಲ್ಲಿ ತೆರಳಿದ್ದಾನೆ. ಇದು ಬೇರೆ ರಸ್ತೆ ಎಂದು ಹೇಳಿದರೂ ಕೇಳಿಸಿಕೊಂಡಿಲ್ಲ. ಆತನ ಭುಜಕ್ಕೆ 8–10 ಬಾರಿ ಹೊಡೆದರೂ ಅಟೋ ನಿಲ್ಲಿಸದೇ ಅಪರಿಚಿತ ಹಾದಿಯಲ್ಲಿ ಮುಂದೆ ಸಾಗಿದ್ದರಿಂದ, ನಾನು ಬೇರೇನೂ ಮಾಡಲು ತೋಚದೇ ಅಟೋದಿಂದ ಕೆಳಗೆ ಹಾರಿದೆ ಎಂದು ನಿಶಿತಾ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮೂಲಕ ನಿಶಿತಾ ಈ ಘಟನೆಯನ್ನು ವಿವರಿಸಿದ್ದಾರೆ. ಅಟೋ ಚಾಲಕನನ್ನು ನೋಡಿದರೆ ಆತ ಉಬೆರ್ ಡ್ರೈವರ್ ರೀತಿ ಕಾಣಿಸುತ್ತಿದ್ದ. ಈ ಸಂದರ್ಭದಲ್ಲಿ ಅಟೋ ನಂಬರ್ ಅನ್ನು ಬರೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಗುರುಗ್ರಾಮದ ಪೊಲೀಸರು ಈ ಪ್ರಕರಣದ ತನಿಖೆಗೆ ಮುಂದಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಟೋ ಮತ್ತು ಚಾಲಕನ ವಿವರ ಪಡೆಯುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.