ADVERTISEMENT

ಅಚ್ಚುಮೆಚ್ಚು ‘ಶರ್ಟ್‌ ಡ್ರೆಸ್‌’

ಮನಸ್ವಿ
Published 18 ಫೆಬ್ರುವರಿ 2022, 19:30 IST
Last Updated 18 ಫೆಬ್ರುವರಿ 2022, 19:30 IST
ಶರ್ಟ್‌ ಡ್ರೆಸ್‌
ಶರ್ಟ್‌ ಡ್ರೆಸ್‌   

ಕಾಲರ್‌, ಮುಂದಿನಿಂದ ಬಟನ್‌, ತುಂಬು ತೋಳಿನ ವಿನ್ಯಾಸ ಹೊಂದಿರುವ ‘ಶರ್ಟ್‌ ಡ್ರೆಸ್‌’ ಧರಿಸಿದಾಗ ಸ್ಟೈಲಿಷ್‌ ಆಗಿ ಕಾಣಿಸಬಹುದು. ಧರಿಸಲು ಸುಲಭವಾಗಿದ್ದು ಸರಳವಾಗಿ ಕಾಣುವ ಈ ಡ್ರೆಸ್‌ಗಳು ಹೆಚ್ಚು ಆರಾಮದಾಯಕ. ಅಲ್ಲದೇ ಬೇಸಿಗೆಯಲ್ಲಿ ಈ ಡ್ರೆಸ್‌ಗಳು ಹೆಚ್ಚು ಹೊಂದುತ್ತವೆ.

ಒಂದು ಕಾಲದಲ್ಲಿ ‘ಶರ್ಟ್‌’ ಹುಡುಗರ ದಿರಿಸಾಗಿತ್ತು. ಈಗ ಕಾಲ ಬದಲಾಗಿದೆ. ಶರ್ಟ್‌ನಂತಿರುವ ಬಗೆ ಬಗೆ ವಿನ್ಯಾಸದ ಉಡುಪುಗಳತ್ತ ಹೆಣ್ಣುಮಕ್ಕಳೂಆಕರ್ಷಿತರಾಗುತ್ತಿದ್ದಾರೆ. ವಿಶೇಷವಾಗಿ ಮಿಲೇನಿಯಲ್ ಹುಡುಗಿಯರು ನವನವೀನ ವಿನ್ಯಾಸದ ಶರ್ಟ್‌ ಡ್ರೆಸ್‌ಗಳನ್ನು ಇಷ್ಟಪಟ್ಟು ಧರಿಸುತ್ತಿದ್ದಾರೆ. ಫ್ಯಾಷನ್ ವಿನ್ಯಾಸಕರೂ ಇಂತಹ ಉಡುಪುಗಳ ವಿನ್ಯಾಸಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದಾರೆ. ಜೀನ್ಸ್‌, ಲೆಗ್ಗಿಂಗ್ಸ್‌, ಜೆಗ್ಗಿಂಗ್ಸ್‌ನಂತಹ ಉಡುಪುಗಳಿಗೆ ‘ಮ್ಯಾಚ್‌’ ಆಗುವ ಈ ಉಡುಪುಗಳು ಎಲ್ಲಾ ಕಾಲದಲ್ಲೂ ಧರಿಸಲು ಸೂಕ್ತ ಎನ್ನುವಂತಿವೆ. ಕಾಲರ್‌, ಮುಂದಿನಿಂದ ಬಟನ್‌, ತುಂಬು ತೋಳಿನ ವಿನ್ಯಾಸ ಹೊಂದಿರುವ ಈ ಡ್ರೆಸ್‌ಗಳನ್ನು ಧರಿಸಿದಾಗ ಸ್ಟೈಲಿಷ್‌ ಆಗಿ ಕಾಣಿಸಬಹುದು. ಧರಿಸಲು ಸುಲಭವಾಗಿದ್ದು ಸರಳವಾಗಿ ಕಾಣುವ ಈ ಡ್ರೆಸ್‌ಗಳು ಹೆಚ್ಚು ಆರಾಮದಾಯಕ. ಅಲ್ಲದೇ ಬೇಸಿಗೆಯಲ್ಲಿ ಈ ಡ್ರೆಸ್‌ಗಳು ಹೆಚ್ಚು ಹೊಂದುತ್ತವೆ.

ಶಿಫಾನ್ ಸ್ಲೀವ್‌ಲೆಸ್ ಶರ್ಟ್ ಡ್ರೆಸ್‌

ADVERTISEMENT

ಇತ್ತೀಚಿನ ಟಾಪ್ ಟ್ರೆಂಡ್‌ಗಳಲ್ಲಿ ಶಿಫಾನ್ ಸ್ಲೀವ್‌ಲೆಸ್ ಶರ್ಟ್ ಡ್ರೆಸ್‌ ಕೂಡ ಒಂದು. ಇದು ಸಾಮಾನ್ಯವಾಗಿ ಮೊಣಕಾಲಿನವರೆಗೆ ಇದ್ದು ಇದರ ಮೇಲೆ ಸೊಂಟಕ್ಕೆ ಬೆಲ್ಟ್ ಧರಿಸಬಹುದು. ಈ ಡ್ರೆಸ್‌ ಧರಿಸಲು ಆರಾಮವಾಗಿದ್ದು ಹೆಚ್ಚು ಸ್ಟೈಲಿಶ್‌ ಆಗಿಯೂ ಕಾಣುತ್ತದೆ. ಇದರೊಂದಿಗೆಬಿಳಿ ಬಣ್ಣದ ಶೂ ಧರಿಸಿದರೆ ಸೂಕ್ತ. ಪಾರ್ಟಿ, ಔಟಿಂಗ್‌ನಂತಹ ಸಂದರ್ಭದಲ್ಲಿ ಧರಿಸಲು ಉತ್ತಮ.

ಸಾಲಿಡ್ ಫಾರ್ಮಲ್ ಶರ್ಟ್ ಡ್ರೆಸ್‌

ಸಾಲಿಡ್‌ ಫಾರ್ಮಲ್‌ ಶರ್ಟ್ ಡ್ರೆಸ್‌ ಅನ್ನು ಎಲ್ಲಾ ಕಾಲದಲ್ಲೂ ಧರಿಸಬಹುದು. ಈ ಡ್ರೆಸ್‌ ಕಚೇರಿಗೆ ಧರಿಸಲು ಸೂಕ್ತ ಎನ್ನಿಸುತ್ತದೆ. ತಿಳಿ ನೀಲಿ, ಬಿಳಿ, ತಿಳಿ ಗುಲಾಬಿ ಬಣ್ಣದ ಫಾರ್ಮಲ್ ಶರ್ಟ್ ಡ್ರೆಸ್ ಹೆಚ್ಚು ಒಪ್ಪುತ್ತದೆ. ಶರ್ಟ್‌ ಮೇಲೆ ಒಂದಿಷ್ಟು ಚಿತ್ತಾರಗಳಿದ್ದರೆ ಆಗ ಇನ್ನಷ್ಟು ಸುಂದರವಾಗಿ ಕಾಣಬಹುದು. ಮುಕ್ಕಾಲು ತೋಳಿನ ಈ ಶರ್ಟ್‌ ಅನ್ನು ಸಿಂಗಲ್ ಪೀಸ್ ಧರಿಸಬಹುದು.

ಪಾಪ್ಲಿನ್‌ ಕಾಷ್ಯುಯಲ್ ಶರ್ಟ್ ಡ್ರೆಸ್‌

ಬಜೆಟ್ ಫ್ಲೆಂಡ್ರಿ ಆಗಿರುವ ಈ ಶರ್ಟ್ ಡ್ರೆಸ್‌ ಹೆಚ್ಚಾಗಿ ನೀಲಿ ಹಾಗೂ ಬಿಳಿ ಬಣ್ಣದಲ್ಲಿರುತ್ತದೆ. ಧರಿಸಲು ಆರಾಮದಾಯಕ ಎನ್ನಿಸುವ ಪಾಪ್ಲಿನ್ ವಿನ್ಯಾಸದ ಡ್ರೆಸ್‌ಗೆ ಸೊಂಟದ ಬಳಿ ಇಲಾಸ್ಟಿಕ್ ಇದೆ. ಸಣ್ಣ ಕಾಲರ್ ವಿನ್ಯಾಸ ಹೊಂದಿರುವ ಈ ಶರ್ಟ್ ಮುಕ್ಕಾಲು ತೋಳಿನದ್ದಾಗಿರುತ್ತದೆ. ಇದನ್ನು ಸಿಂಗಲ್ ಡ್ರೆಸ್ ರೂಪದಲ್ಲೂ ಧರಿಸಬಹುದು. ಇದರಲ್ಲಿ ಉದ್ದ ತೋಳಿನ ವಿನ್ಯಾಸ ಡ್ರೆಸ್‌ ಕೂಡ ಧರಿಸಲು ಸೂಕ್ತ ಎನ್ನಿಸುತ್ತದೆ. ಇದನ್ನು ಷಾಪಿಂಗ್‌, ಸ್ನೇಹಿತರ ಕೂಟದಂತಹ ಸಂದರ್ಭದಲ್ಲಿ ಧರಿಸಲು ಸೂಕ್ತ ಎನ್ನಿಸುತ್ತದೆ.

ಎಂಬ್ರಾಯಿಡರಿ ರೌಂಡ್ ನೆಕ್ ಶರ್ಟ್

ಎಂಬ್ರಾಯಿಡರಿ ಚಿತ್ತಾರವಿರುವ ರೌಂಡ್ ನೆಕ್ ಶರ್ಟ್ ಮೊಣಕಾಲಿಗಿಂತಲೂ ಕೊಂಚ ಕೆಳಗಿನವರೆಗಿರುತ್ತದೆ. ತಿಳಿ ಬಣ್ಣದ ಬಟ್ಟೆಯ ಮೇಲೆ ತೆಳ್ಳನೆಯ ಗೆರೆಗಳನ್ನು ಹೊಂದಿರುವಂತಹ ಈ ಡ್ರೆಸ್‌ ಹೆಣ್ಣುಮಕ್ಕಳ ಅಂದ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಪ್ಲೋರಲ್‌ ಮ್ಯಾಕ್ಸಿ ಶರ್ಟ್ ಡ್ರೆಸ್‌

ಪ್ಲೋರಲ್ (ಹೂವಿನ ಚಿತ್ತಾರ) ವಿನ್ಯಾಸ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಈ ವಿನ್ಯಾಸದ ಸೀರೆ, ಡ್ರೆಸ್‌ ಎಲ್ಲವೂ ಹೆಣ್ಣುಮಕ್ಕಳಿಗೆ ಅಂದವಾಗಿಯೇ ಕಾಣಿಸುತ್ತದೆ. ಈ ವಿನ್ಯಾಸದ ಶರ್ಟ್ ರೂಪದ ಡ್ರೆಸ್ ಈಗ ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಪಾರ್ಟಿ, ಕಚೇರಿ, ಷಾಪಿಂಗ್‌ ಹೀಗೆ ಎಲ್ಲಾ ಸಂದರ್ಭಕ್ಕೂ ಹೊಂದುವ ಈ ಡ್ರೆಸ್ ಗಾಢ ಬಣ್ಣದಲ್ಲಿ ಹೆಚ್ಚು ಅಂದವಾಗಿ ಕಾಣುತ್ತದೆ. ಪ್ಲೋರಲ್‌ ವಿನ್ಯಾಸದ ಶರ್ಟ್‌ ಡ್ರೆಸ್ ಶಾರ್ಟ್‌, ಲಾಂಗ್‌, ಮಿಡ್ಡಿ ಹೀಗೆ ಎಲ್ಲಾ ರೂಪದಲ್ಲೂ ಲಭ್ಯವಿದೆ. ಇದನ್ನು ಎಲ್ಲಾ ವಯೋಮಾನದವರು ತೊಡಬಹುದು.

ಪ್ಲಸ್ ಸೈಜ್ ಶರ್ಟ್ ಡ್ರೆಸ್‌

‘ಶರ್ಟ್‌ ಡ್ರೆಸ್ ನಮಗೆ ಧರಿಸಲು ಸಾಧ್ಯವಿಲ್ಲ’ ಎಂದು ಪ್ಲಸ್ ಸೈಜ್‌ನವರು ಬೇಸರಿಸುವ ಹಾಗಿಲ್ಲ. ಪ್ರಿಂಟ್ ಇರುವ ಮೊಣಕಾಲಿಗಿಂತ ಕೊಂಚ ಕೆಳಗಿನವರೆಗೆ ಬರುವ ಪ್ಲಸ್ ಸೈಜ್ ಶರ್ಟ್‌ಗಳನ್ನೂ ವಸ್ತ್ರ ವಿನ್ಯಾಸಕರು ವಿನ್ಯಾಸ ಮಾಡಿದ್ದಾರೆ. ಪ್ಲಸ್‌ ಸೈಜ್‌ನವರಿಗೆ ಇದು ಧರಿಸಲು ಸೂಕ್ತವಾಗಿದೆ. ದು ಆರಾಮದಾಯಕ ಉಡುಪಾಗಿದ್ದು ಅಂದವನ್ನೂ ಹೆಚ್ಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.