ADVERTISEMENT

ಸೋಲಿಸದಿರು ಗೆಲಿಸಯ್ಯ: ಕಮಲಾ ಸಿದ್ದಿ– ಕ್ರೀಡೆಯಿಂದಲೇ ‘ಸಿದ್ಧಿ’ಸಿಕೊಂಡ ಕಮಲಾ

ನೈರುತ್ಯ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ವಿಭಾಗದ ಮುಖ್ಯ ಕಚೇರಿ ವ್ಯವಸ್ಥಾಪಕಿಯಾಗಿರುವ ಕ್ರೀಡಾಪಟು ಕಮಲಾ ಸಿದ್ದಿ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ

ಪ್ರಜಾವಾಣಿ ವಿಶೇಷ
Published 1 ಮಾರ್ಚ್ 2024, 23:59 IST
Last Updated 1 ಮಾರ್ಚ್ 2024, 23:59 IST
<div class="paragraphs"><p>ಹುಬ್ಬಳ್ಳಿಯ ನೈರುತ್ಯ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ವಿಭಾಗದ ಮುಖ್ಯ ಕಚೇರಿ ವ್ಯವಸ್ಥಾಪಕಿಯಾಗಿರುವ ಕ್ರೀಡಾಪಟು ಕಮಲಾ ಸಿದ್ದಿ</p></div>

ಹುಬ್ಬಳ್ಳಿಯ ನೈರುತ್ಯ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ವಿಭಾಗದ ಮುಖ್ಯ ಕಚೇರಿ ವ್ಯವಸ್ಥಾಪಕಿಯಾಗಿರುವ ಕ್ರೀಡಾಪಟು ಕಮಲಾ ಸಿದ್ದಿ

   

ಬಡತನವಿರಲಿ, ಸವಾಲುಗಳು ಎದುರಾಗಲಿ, ಸಾಧಿಸುವ ಛಲ, ಪಾಲಕರ ಪ್ರೋತ್ಸಾಹ, ಗುರುವಿನ ಮಾರ್ಗದರ್ಶನ ಇದ್ದರೆ ಎಂಥಹ ಸಾಧನೆಯ ಶಿಖರವನ್ನು ಹತ್ತಿ ನಿಲ್ಲಬಹುದು ಎನ್ನುವುದಕ್ಕೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ವಿಭಾಗದ ಮುಖ್ಯ ಕಚೇರಿ ವ್ಯವಸ್ಥಾಪಕಿಯಾಗಿರುವ ಕ್ರೀಡಾಪಟು ಕಮಲಾ ಸಿದ್ದಿ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಮತ್ತು ಚಿಕ್ಕೋಟ್ಟಿ ಗ್ರಾಮದ ಕಮಲಾ, ಸರ್ಕಾರಿ ಶಾಲೆಯಲ್ಲಿ 1ರಿಂದ 4ರ ವರೆಗೆ ವಿದ್ಯಾಭ್ಯಾಸ ಆರಂಭಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಚಿಕೇರಿಯ ಹಾಸ್ಟೆಲ್ ಸೇರಿಕೊಂಡರು. ಅಲ್ಲಿಂದ ಚಿಗುರೊಡೆದ ಕ್ರೀಡಾಸಕ್ತಿಗೆ ನೀರು ಎರೆದು ಪೋಷಿಸಿದವರು ಪಾಲಕರು ಮತ್ತು ಶಿಕ್ಷಕ ಜಯಪ್ಪ.

ADVERTISEMENT

ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟ ಅಷ್ಟೇ ಅಲ್ಲದೆ ಎಂಟು ವಿಶೇಷ ಒಲಂಪಿಕ್‌ (ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ)ನಲ್ಲಿ ಭಾಗವಹಿಸಿದ ಹಿರಿಮೆ ಕಮಲಾ ಅವರದ್ದು. ದೇಶ, ವಿದೇಶಗಳಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿ, ಶ್ರೇಷ್ಠ ಹಡಲ್ಸ್‌ ಕ್ರೀಡಾಪಟುವಾಗಿ 1999ರಿಂದ 2000ರ ವರೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಒಟ್ಟು 22 ಬಂಗಾರ, 10 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಹೈ ಜಂಪ್, ಲಾಂಗ್ ಜಂಪ್, ಶಾಟ್ ಪುಟ್, ರನ್ನಿಂಗ್, ಜಾವಲಿನ್, ಹರ್ಡಲ್ಸ್ , ಕೊಕ್ಕೊ ಆಟಗಳಲ್ಲಿ ಸೈ ಎನಿಸಿಕೊಂಡು ಪದಕ ಬಾಚಿಕೊಂಡಿದ್ದಾರೆ.

ಕೇರಳ, ದೆಹಲಿ, ನಿಜಾಮಾಬಾದ್‌, ಓಡಿಸ್ಸಾ, ಚಂಡಿಗಡ್‌, ತಂಜಾವೂರ್‌, ಯುಎಸ್‌ ಕ್ಯಾಲಿಫೋರ್ನಿಯಾ ಸೇರಿದಂತೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ.

ಕ್ರೀಡಾ ಕೋಟಾದಲ್ಲಿಯೇ ಪೊಲೀಸ್ ಇಲಾಖೆ, ರೈಲ್ವೆ ಇಲಾಖೆಯಲ್ಲಿ ನೌಕರಿ ಹುಡುಕಿಕೊಂಡು ಬಂದವು. ಪತಿ, ಮಕ್ಕಳು ಕೂಡ ಕ್ರೀಡಾಪಟುಗಳಾಗಿದ್ದಾರೆ. ಕಮಲಾ ಸಿದ್ಧಿ ಈಗ ಹಲವಾರು ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.