ADVERTISEMENT

ದಾರದಿಂದ ಹೆಣೆದ ಅಚ್ಚರಿಯ ಆಭರಣಗಳು

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2023, 23:39 IST
Last Updated 15 ಸೆಪ್ಟೆಂಬರ್ 2023, 23:39 IST
   

ಜಾನಕಿ ಎಸ್.

ತಾಯಂದಿರು ತಮ್ಮ ಹೆಣ್ಣು ಮಕ್ಕಳ ಉಡುಗೆ ತೊಡುಗೆ ಬಗ್ಗೆ  ಕಾಳಜಿಯಿಂದ ಗಮನಹರಿಸುತ್ತಾರೆ.ತನ್ನ ಮುದ್ದಾದ ಮಗಳ  ಅಲಂಕಾರಕ್ಕೆ ಏನೆಲ್ಲಾ ಹುಡುಕಿ ತರುತ್ತಾಳೆ. ಆಭರಣ  ಆಯ್ಕೆ ವೇಳೆ  ಚಿನ್ನದಾಭರಣ ಹಾಕಿಹೊರಗೆ ಕಳುಹಿಸಲು ಅಷ್ಟೇ ಭಯಪಡುತ್ತಾಳೆ.ಹೀಗಿರುವಾಗ ಎಲ್ಲೆಂದರಲ್ಲಿ ಆರಾಮವಾಗಿ ಬಳಸುವ  ಅಂದ ಹೆಚ್ಚಿಸುವ ಬಟ್ಟೆ ಆಭರಣ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದರೆ ಯಾರಿಗೆ ತಾನೆ ಇಷ್ಟವಾಗುವದಿಲ್ಲ ? ಈಗಂತೂ ಡ್ರೆಸ್,ಸೀರೆ ಉಡವವರು ಮಿಕ್ಸ್ ಎಂಡ್ ಮ್ಯಾಚ್ ಮಾಡುವ ಕಾಲ.

ಧರಿಸಿದ ಉಡುಪುಗಳಿಗೆ ಗ್ರ್ಯಾಂಡ್ ಲುಕ್ ನೀಡುವ ಈ ಬಟ್ಟೆ - ದಾರದ  ಆಭರಣಗಳು ಹಾಕಿಕೊಳ್ಳಲು ಹಗುರವಾಗಿ , ಬಟ್ಟೆ ಹಾಕಿಕೊಂಡತೆ ನೈಜವಾಗಿರುತ್ತದೆ. ಫ್ಯಾಬ್ರಿಕ್ ಜವೆಲರಿ ನೋಡಲು ಚಿನ್ನ ಹಾಗೂ ಬೆಳ್ಳಿ ಆಭರಣಗಳ ಮಾದರಿಯಲ್ಲಿ ಇರುವಂತೆ ಇರುವದರಿಂದ  ಧರಿಸಿದ  ಹೆಂಗಳಯರು  ಆನಂದ ಪಡುತ್ತಾರೆ. ಸಣ್ಣ ಮಕ್ಕಳಿಂದ ದೊಡ್ಡವರ ತನಕ  ಎಲ್ಲರಿಗು ಒಪ್ಪುವ  ಈ ಒಡವೆ  ತುಂಬಾ ಹಗುರ ಮತ್ತು ಇವುಗಳನ್ನು ಕಾಪಡಿಕೊಳ್ಳುವದು ಸುಲಭ.

ADVERTISEMENT

ಲಾಕೆಟ್‌: ಹಲವು ಬಗೆ  ಲಾಕೆಟ್ ಇಟ್ಟುಕೊಂಡರೆ ಒಂದು ಸಿಲ್ವರ್ ಚೈನ್‌  ಜೊತೆ  ಸೇರಿಸಿ ಹಾಕಿಕೊಳ್ಳಬಹುದು. ಬದ್ಧನ ಮುಖದ ಪ್ರಿಂಟ್ ಇರುವ ಬಟ್ಟೆಯಿಂದ ಮಾಡಿದ ಪದಕ, ಕಲಮ್ ಕಾರಿ ಪ್ರಿಂಟ್ ಇರುವ ಪದಕ, ಇಳಕಲ್ ಬಾರ್ಡರ್ ಪೆಂಡೆಂಟ್, ಹೀಗೆ ದೊಡ್ಡದು ಚಿಕ್ಕದು ಸಂದರ್ಭಕ್ಕೆ ಸರಿಯಾಗಿ ಧರಿಸುವ ಧಿರಿಸಿಗೆ ಹೊಂದಿಕೊಳ್ಳುತ್ತದೆ.

ಲೇಯರ್ಡ್ ಹಾರ: ಮೂರು ನಾಲ್ಕು ಎಳೆಗಳನ್ನು ಪ್ರಿಂಟ್ ಬಟ್ಟೆಯಿಂದ ಮಾಡಿರುವದರಿಂದ ಮಾಡರ್ನ ಡ್ರೆಸ್ ಮೇಲೆ ಹಾಕಿದರೆ ಸ್ಟೈಲ್ ಆಗಿ ಕಾಣುವದು. ಬೇರೆ ರೀತಿಯಲ್ಲೂ ಹಾಕಿ ಕುತ್ತಿಗೆಯಿಂದ ಸ್ವಲ್ಪ ಕೆಳಗೆ ಭುಜದವರೆಗೆ  ಧರಿಸಿ ಪಿನ್ ಮಾಡಿದರೆ ಡ್ರೆಸ್ ಮಾದರಿಯನ್ನೆ ಬದಲಾಯಿಸಬಹುದು.

ಚೋಕರ್, ಲಾಂಗ್ ಚೋಕರ್,ಬಟ್ಟೆಯ ಬೀಡ್ಸಹಾರ,ಕುಂದನ್,ಮುತ್ತಗಳಿಂದ ನೇಯ್ದ ಹಾರಗಳು ಆಧುನಿಕ ಡ್ರೆಸ್ ನಿಂದ ಸೀರೆಯವರೆಗೂ ಪರ್ಫೆಕ್ಟ್ ಮ್ಯಾಚ್ ಆಗುತ್ತೆ.

ರೇಷ್ಮೆ ಬಟ್ಟೆ , ಮುತ್ತಿನ ಗೊಂಚಲು,ಸಣ್ಣಹರಳುಜೋಡಿಸಿದ ಕಿವಿ ಓಲೆ  ರಿಸೆಪ್ಷನ್ ದಿನ ಧರಿಸಿದ ಮದುಮಗಳು ಇನ್ನಷ್ಟು ಮಿಂಚುತ್ತಾಳೆ.

ಕರಕುಶಲ ಕಲೆ  ಬಲ್ಲವರು ಮನೆಯಲ್ಲಿ ಮಾಡಬಹುದು.ಕ್ಯಾನ್ವಸ್,ರಟ್ಟು,ಹತ್ತಿ , ಒಳ್ಳೆ ಬಟ್ಟೆ ಅಂಟು ,ದಾರಗಳಿಂದ ತಮ್ಮ ಇಚ್ಛಾನುಸಾರ ತಯಾರಿಸಬಹುದು. ಆನ್ಲೈನ್ ಖರೀದಿ ಮಾಡಲು ಲಭ್ಯವಿದೆ.

ಈ ಆಭರಣ ಹಿಂದೆ ಕೇವಲ ಬಂಗಾರದ ಬೊಳುಗುಂಡು, ರೇಷ್ಮೆ ದಾರದ ಮಣಿಗಳ ಮಧ್ಯೆ ಪೋಣಿಸಿ ಉತ್ತರ ಕರ್ನಾಟಕ, ಮಹಾರಾಷ್ಟ್ರ ಕಡೆಗಳಲ್ಲಿ ಬಳಕೆಯಲ್ಲಿ ಇತ್ತು. ಈಗ ಅದರ ಸುಧಾರಿತ ರೂಪ ಮತ್ತಷ್ಟು ಜನಪ್ರಿಯ ವಾಗಿದೆ..ಹಾಗೆ ಬಣ್ಣದ ನೂಲು ,ಪ್ರಿಂಟ್ ಬಟ್ಟೆ ಬಳಸಿ ಟ್ರೆಂಡಗೆ ತಕ್ಕಂತೆ ಹೊಸ ರೂಪ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.